

ಬೈಂದೂರು: ಉತ್ತರ ಕನ್ನಡ ಜಿಲ್ಲೆಯ ನೀಲ್ಕೋಡಿನ ಅಭಿನೇತ್ರಿ ಆರ್ಟ್ ಟ್ರಸ್ಟ್ ನೇತೃತ್ವದಲ್ಲಿ ಅನುಭವಿ, ವೃತ್ತಿಪರ ಯಕ್ಷಗಾನ ಕಲಾವಿದರ ತಂಡ ಯುಕೆ (ಇಂಗ್ಲೆಂಡ್)ಗೆ ಪ್ರವಾಸ ಕೈಗೊಂಡಿದೆ. ಅಲ್ಲಿನ ಅನಿವಾಸಿ ಯಕ್ಷಗಾನ ಅಭಿವಾನಿ ಮಂಡಳಿ (ಅಯಮ) ಪ್ರದರ್ಶನಗಳನ್ನು ನಿರ್ವಹಿಸಲಿದೆ.
ತಂಡದಲ್ಲಿ ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಗಾರ ರಾವೇಂದ್ರ ಯಲಗುಪ್ಪ, ಚೆಂಡೆವಾದಕ ಗಣೇಶ ಗಾಂವ್ಕರ್, ವೇಷಧಾರಿಗಳಾದ ಶಂಕರ ನೀಲ್ಕೋಡು, ಸುಬ್ರಹ್ಮಣ್ಯ ಯಲಗುಪ್ಪ, ಸನ್ಮಯ್ ಭಟ್ ಇದ್ದ್ದಾರೆ. ಅಗತ್ಯವೆನಿಸಿದರೆ ಯುಕೆಯಲ್ಲಿ ನೆಲೆಸಿರುವ ಹವ್ಯಾಸಿ ಕಲಾವಿದರು ಜೊತೆಯಾಗುವರು. ಈ ತಂಡ 20 ದಿನ ಯುಕೆಯಲ್ಲಿ ತಂಗಲಿದ್ದು, ಜೂ.28ಕ್ಕೆ ಡರ್ಬಿಯಲ್ಲಿ, 29ಕ್ಕೆ ವ್ಯಾಂಚೆಸ್ಟರ್‌ನಲ್ಲಿ, ಜುಲೈ 5ಕ್ಕೆ ಸಾಲಿಹುಲ್‌ನಲ್ಲಿ ಪ್ರದರ್ಶನಗಳು ನಿಗದಿಯಾಗಿವೆ ಎಂದು ಅಯಮ ಪ್ರಕಟಣೆ ತಿಳಿಸಿದೆ.