ಯೋಜನೆ ಅರಿವಿನಿಂದ ಲಾಭ ಪಡೆಯಲು ಸಾಧ್ಯ

ಕೆ.ಎಂ.ಸಿಯ ಆರೋಗ್ಯ ಮಿತ್ರ ವಿಭಾಗದ ಸುಜನ್ಮಾಲಾ ಅಭಿಪ್ರಾಯ
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಆಯುಷ್ಮಾನ್​ ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಕವಿತಾ ಎಂ.ಸಿ., ಗೋಪಾಲ ಬಿಲ್ಲವ, ಸುಗುಣಾ ಆರ್​.ಕೆ. ಮತ್ತಿತರರಿದ್ದರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಆಯುಷ್ಮಾನ್​ ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಕವಿತಾ ಎಂ.ಸಿ., ಗೋಪಾಲ ಬಿಲ್ಲವ, ಸುಗುಣಾ ಆರ್​.ಕೆ. ಮತ್ತಿತರರಿದ್ದರು.
Published on: 

ಕುಂದಾಪುರ: ಬಡ ರೋಗಿಗಳ ಪಾಲಿಗೆ ಆಯುಷ್ಮಾನ್​ ಯೋಜನೆ ಅದ್ಭುತ ವರದಾನವಾಗಿದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಅರಿವು ನಮ್ಮಲ್ಲಿದ್ದಾಗ ಮಾತ್ರ ಆ ಯೋಜನೆ ಫಲವನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್​ ಯೋಜನೆ ಬಗ್ಗೆ ತಿಳಿದು ಅದನ್ನು ಇತರರಿಗೂ ತಿಳಿಸುವಲ್ಲಿ ನಾವು ಮುಂದಾಗಬೇಕು ಎಂದು ಕೆ.ಎಂ.ಸಿಯ ಆರೋಗ್ಯ ಮಿತ್ರ ವಿಭಾಗದ ಸುಜನ್ಮಾಲಾ ಅಭಿಪ್ರಾಯಪಟ್ಟರು.

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಸ್​.ವಿ.ಕಾಮರ್ಸ್​ ಕ್ಲಬ್​ ಆಶ್ರಯದಲ್ಲಿ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್​ ರೋಟರಿ ಒಳಾಂಗಣದಲ್ಲಿ ಸೋಮವಾರ ನಡೆದ ಆಯುಷ್ಮಾನ್​ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಪಾಲ ಬಿಲ್ಲವ ಶುಭ ಹಾರೈಸಿದರು.

ಉಪನ್ಯಾಸಕಿ ಸುಗುಣಾ ಆರ್​.ಕೆ. ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸನ್ನಿಧಿ ಮತ್ತು ಶ್ರೀಲಕ್ಷ್ಮೀ ಉಪಸ್ಥಿತರಿದ್ದರು.

ಫ್ಲೇವನ್​ ಲೋಬೊ ಸ್ವಾಗತಿಸಿದರು. ದೀಪಾಲಿ ಪ್ರಾರ್ಥಿಸಿದರು. ಅಕ್ಷಯಾ ಆರ್​. ಖಾರ್ವಿ ಪ್ರಾಸ್ತಾವಿಕ ಮಾತುಗಳಾಡಿದರು. ನರೇಂದ್ರ ಎಸ್​.ಗಂಗೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿವಾಸ ಪೈ ನಿರೂಪಿಸಿದರು. ತನ್ವಿ ವಂದಿಸಿದರು.