

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ನಿವಾಸಿ ಕಾಕೂ ಜಹೀರ್ ಅಹ್ಮದ್ ಎಂಬುವರ ಪುತ್ರಿ ಕೆ.ಆಯಿಶಾ ಶವಾನಾ(23) ನಾಪತ್ತೆಯಾಗಿದ್ದಾರೆ.
ಮದುವೆ ವಿಚಾರ ಪ್ರಸ್ತಾಪಿಸಿದ ಹೆತ್ತವರು
ಈಕೆ ಬಿ.ಎಸ್.ಸಿ. ವ್ಯಾಸಂಗ ಮುಗಿಸಿ ಬೆಂಗಳೂರಿನ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 15 ದಿನಗಳ ಹಿಂದೆ ರಜೆಯಲ್ಲಿ ಮನೆಗೆ ಬಂದಿದ್ದ ವೇಳೆ ಹೆತ್ತವರು ಮಗಳಲ್ಲಿ ಮದುವೆ ಬಗ್ಗೆ ವಿಚಾರ ಪ್ರಸಾಪಿಸಿದ್ದು, ಈಕೆ ಮದುವೆಯಾಗಲು ನಿರಾಕರಿಸಿದ್ದರು.
ಬೆಳಗಿನ ಜಾವ ಕಾಣೆ!
ಅ.5ರಂದು ಬೆಳಗಿನ ಜಾವ 4.30ರ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದಾರೆ. ಕನ್ನಡ, ಹಿಂದಿ, ಉರ್ದು, ಇಂಗ್ಲಿಷ್ ಮಾತನಾಡಬಲ್ಲ ಅವರು ಕಪ್ಪು ಬಣ್ಣದ ಬುರ್ಖಾ ಮತ್ತು ಚೂಡಿದಾರ ಧರಿಸಿದ್ದಾರೆ. ತಂದೆ ನೀಡಿದ ದೂರಿನನ್ವಯ ಬೈಂದೂರು ಪೊಲಿಸ್ ಠಾಣೆಯಲ್ಲಿ ದಾಖಲಾಗಿದೆ.