ಅಡಮಾನ ಇಟ್ಟ ಚಿನ್ನ ನೀಡದೆ ವಂಚನೆ

ಸಾರ್ವಜನಿಕರಿಗೆ ವಂಚನೆ
ಕಡಿಮೆ ಬಡ್ಡಿ ದರಕ್ಕೆ ಚಿನ್ನ ಅಡಮಾನದ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನವನ್ನು ಅಡಮಾನವಿರಿಸಿಕೊಂಡು ಅವರಿಗೆ ಸಾಲ ನೀಡಿ ನಂತರ ಚಿನ್ನವನ್ನು ವಾಪಸ್​ ನೀಡದೆ ವಂಚನೆ
ಕಡಿಮೆ ಬಡ್ಡಿ ದರಕ್ಕೆ ಚಿನ್ನ ಅಡಮಾನದ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನವನ್ನು ಅಡಮಾನವಿರಿಸಿಕೊಂಡು ಅವರಿಗೆ ಸಾಲ ನೀಡಿ ನಂತರ ಚಿನ್ನವನ್ನು ವಾಪಸ್​ ನೀಡದೆ ವಂಚನೆ
Published on: 

ಕುಂದಾಪುರ: ಕುಂದಾಪುರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿರುವ ಗೋಲ್ಡ್​ ಲೋನ್​ ಶಾಖೆಯಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ ಚಿನ್ನ ಅಡಮಾನದ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನವನ್ನು ಅಡಮಾನವಿರಿಸಿಕೊಂಡು ಅವರಿಗೆ ಸಾಲ ನೀಡಿ ನಂತರ ಚಿನ್ನವನ್ನು ವಾಪಸ್​ ನೀಡದೆ ವಂಚಿಸಲಾಗಿದೆ.

2025 ಸೆಪ್ಟೆಂಬರ್​ನಿಂದ 2026 ನವೆಂಬರ್​ವರೆಗೆ ವಂಚನೆ ನಡೆದಿದ್ದು, ಮೋಸ ಹೋದವರು ಗಂಗೊಳ್ಳಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿಗಳಾದ ಗೋವಾ ಮೂಲದ ಭೀಮಪ್ಪ ಯಲ್ಲಪ್ಪ ಛಲವಾದಿ, ಸ್ಥಳಿಯರಾದ ಸುಭಾಷ್​ ಖಾರ್ವಿ, ನೇತ್ರಾವತಿ ಖಾರ್ವಿ ಅಲಿಯಾಸ್​ ಸ್ವಪ್ನಿಲಾ ಪಾಲೇಕರ್​, ಪ್ರಮೀತಾ ಖಾರ್ವಿ, ಅಕ್ಷಯ ಸಾರಂಗ ಎಂಬುವರು ಈವರೆಗೆ 750.98 ಗ್ರಾಂ. ಚಿನ ಅಡವಿರಿಸಿಕೊಂಡು ಸಾಲ ನೀಡಿದ್ದು, ಚಿನ್ನವನ್ನು ವಾಪಸ್​ ನೀಡುವಂತೆ ಕೇಳಿದಾಗ ನಂತರ ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಸಂಸ್ಥೆಯನ್ನು ಮುಚ್ಚಿದ್ದು, ಹಲವು ಮಂದಿಗೆ ಇದೇ ರೀತಿ ವಂಚಿಸಿರುವ ಸಾಧ್ಯತೆ ಇದೆ. ಗಂಗೊಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.