ಯುವಶಕ್ತಿ ಸಮಿತಿ ಸಂಘ-ಸಂಸ್ಥೆಗಳಿಗೆ ಮಾದರಿ

ಭರತನಾಟ್ಯ, ಯಕ್ಷಗಾನ ಪ್ರದರ್ಶನ
 ಶಿರೂರು ಕರಾವಳಿ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಸಿ.ಎನ್.ಬಿಲ್ಲವ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಯಶವಂತ್ ಬಿಲ್ಲವ, ಚಿಕ್ಕು ಪೂಜಾರಿ, ಚಂದ್ರ ಮೊಗೇರ್, ಮಾಚ ಬಿಲ್ಲವ ಮಂಗಳುಮನೆ, ಗಿರಿಜಾ ಐ.ಮೊಗೇರ್, ಮಾಧವ ಬಿಲ್ಲವ ಕಾಳನಮನೆ, ವಾಸು ಬಿಲ್ಲವ ತೆಂಕಮನೆ ಉಪಸ್ಥಿತರಿದ್ದರು.
ಶಿರೂರು ಕರಾವಳಿ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಸಿ.ಎನ್.ಬಿಲ್ಲವ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಯಶವಂತ್ ಬಿಲ್ಲವ, ಚಿಕ್ಕು ಪೂಜಾರಿ, ಚಂದ್ರ ಮೊಗೇರ್, ಮಾಚ ಬಿಲ್ಲವ ಮಂಗಳುಮನೆ, ಗಿರಿಜಾ ಐ.ಮೊಗೇರ್, ಮಾಧವ ಬಿಲ್ಲವ ಕಾಳನಮನೆ, ವಾಸು ಬಿಲ್ಲವ ತೆಂಕಮನೆ ಉಪಸ್ಥಿತರಿದ್ದರು.
Published on: 

ಬೈಂದೂರು: ಗ್ರಾಮೀಣ ಭಾಗದಲ್ಲಿ ಯುವಕರು ಊರಿನ ಅಭಿವೃದ್ಧಿ ಮತ್ತು ಸಂಘಟನೆ ಉದ್ದೇಶದಿಂದ ಸ್ಥಾಪಿಸಿದ ಯುವಶಕ್ತಿ ಸಮಿತಿ ಇಂದು ಹೆಮ್ಮರವಾಗಿ ಬೆಳೆದಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲ ವಿಭಾಗದಲ್ಲೂ ಚಟುವಟಿಕೆ ವೃದ್ಧಿಸಿರುವುದು ಇಲ್ಲಿನ ಸಾಂಘಿಕ ಪ್ರಯತ್ನದ ಫಲ ಮತ್ತು ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದು ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿ ಪುರಸ್ಕೃತ ಸಿ.ಎನ್.ಬಿಲ್ಲವ ಹೇಳಿದರು.

ಶಿರೂರು ಯುವಶಕ್ತಿ ಸಭಾ ವೇದಿಕೆಯಲ್ಲಿ ನಡೆದ ಕರಾವಳಿ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿಯ 28ನೇ ವರ್ಷದ ಗಣೇಶೋತ್ಸವ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಭರತನಾಟ್ಯ ಮತ್ತು ಯಕ್ಷಗಾನ ವಿದ್ಯಾರ್ಥಿಗಳ ಪ್ರಥಮ ಪ್ರದರ್ಶನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ್ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಕ್ಷೇತ್ರಕ್ಕೆ ಪದಾರ್ಪಣೆಗೊಂಡ ಡಾ.ರಚನಾ ಮಾಚ ಬಿಲ್ಲವ, ಸಂಗೀತಾ ಪೂಜಾರಿ ಬೇಡುಮನೆ, ನಿವೃತ್ತ ಮುಖ್ಯ ಶಿಕ್ಷಕಿ ಭಾಗೀರಥಿ ಮೊಗೇರ್, ಯಕ್ಷಗುರು ಶ್ರೀಧರ ಉಪ್ಪುಂದ, ಭರತನಾಟ್ಯ ಕಲಾವಿದೆ ಅಮೃತಾ ಎನ್. ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಶಿರೂರು ಯಕ್ಷಸಂಪದ ಕಲಾ ಬಳಗ ಅಧ್ಯಕ್ಷ ಚಿಕ್ಕು ಪೂಜಾರಿ, ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ಅಪೆಕ್ಸ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಮಾಚ ಬಿಲ್ಲವ ಮಂಗಳುಮನೆ, ಉಪತಹಸೀಲ್ದಾರ್ ಗಿರಿಜಾ ಐ.ಮೊಗೇರ್, ಮಾಧವ ಬಿಲ್ಲವ ಕಾಳನಮನೆ, ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ, ಮಹಾದೇವ ಬಿಲ್ಲವ ಜಂಗ್ಲಿಮನೆ, ರಾಮ ಟೈಲರ್, ಅರುಣ್ ಮೊಗೇರ್ ಸಂಕುಮನೆ, ಹಿರಿಯರಾದ ವೆಂಕ್ಯು ಪೂಜಾರಿ ಕಾಳನಮನೆ, ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ, ಜಲಜಾಕ್ಷಿ ಮಂಗಳುಮನೆ ಉಪಸ್ಥಿತರಿದ್ದರು. ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net