ಅಧ್ಯಾತ್ಮಿಕ ಶಕ್ತಿ ಸಾಧನೆಗೆ ಮೂಲ

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ವಜ್ರಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಯಕ್ಷಗಾನ ಸ್ವರ್ಧೆ ಉದ್ಘಾಟಿಸಿ ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು
yakshagana
ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಯಕ್ಷಗಾನ ಸ್ವರ್ಧೆ ಉದ್ಘಾಟಿಸಿದರು.
Published on: 

ಉಡುಪಿ: ಉತ್ಕ್ರಷ್ಟವಾದ ಸಂಸತಿಯನ್ನು ಹೊಂದಿದ ಭಾರತ ದೇಶದ ವಿವಿಧ ಕಲೆಗಾರಿಕೆಯನ್ನು ಈಗಿನ ಯುವ ಸಮೂಹ ತಿಳಿದುಕೊಳ್ಳುವುದು ಅತ್ಯಗತ್ಯ. ಸ್ಪರ್ಧೆಯಲ್ಲಿ ಹೆಚ್ಚು ಪ್ರಯತ್ನ ಪಡುವವರು ಯಶಸ್ಸು ಗಳಿಸುತ್ತಾರೆ. ಆದರೆ ಯಕ್ಷಗಾನ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌರಾಣಿಕ ಜ್ಞಾನವೂ ಲಭಿಸುತ್ತದೆ ಎಂದು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಶುಕ್ರವಾರ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ವಜ್ರಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಯಕ್ಷಗಾನ ಸ್ವರ್ಧೆ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪರಂಪರೆಯ ಅರಿವಿಂದ ಅಧ್ಯಾತ್ಮದ ಸೆಳೆತ ಹೆಚ್ಚಾಗಿ ಸಾಧನೆಯ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದರು.

ಹಿರಿಯು ವಿದ್ವಾಂಸ ಪ್ರೊ. ಎಂ ಎಲ್​ ಸಾಮಗ, ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಪ್ರಶಾಂತ ಹೊಳ್ಳ, ಪ್ರಾಂಶುಪಾಲ ಡಾ. ಚಂದ್ರಕಾಂತ್​ ಭಟ್​ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲ ಅಧಿಕಾರಿ ವಿನಾಯಕ ಪೈ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಜಿಗಳೂರು ವಂದಿಸಿದರು. ವಿದ್ಯಾರ್ಥಿನಿ ನವ್ಯಾ ಹೆಬ್ಬಾರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net