ನೀರು ಪೋಲು ಮಾಡಿದರೆ ಮುಂದೆ ಕಣ್ಣೀರು

ಉಡುಪಿಯ ಕಡಿಯಾಳಿ ಶಾಲೆಯಲ್ಲಿ ವಿಶ್ವ ಜಲ ಹಾಗೂ ವಿಶ್ವ ವಾತಾವರಣ ದಿನ ಆಚರಿಸಲಾಯಿತು. ಪ್ರಭಾವತಿ ಎಸ್​. ಅಡಿಗ, ಶ್ರೀನಿವಾಸ್​ ರಾವ್​ ಕೆ., ಸುನೀತಾ ಶೇಟ್​ ಇದ್ದರು.
ಉಡುಪಿಯ ಕಡಿಯಾಳಿ ಶಾಲೆಯಲ್ಲಿ ವಿಶ್ವ ಜಲ ಹಾಗೂ ವಿಶ್ವ ವಾತಾವರಣ ದಿನ ಆಚರಿಸಲಾಯಿತು. ಪ್ರಭಾವತಿ ಎಸ್​. ಅಡಿಗ, ಶ್ರೀನಿವಾಸ್​ ರಾವ್​ ಕೆ., ಸುನೀತಾ ಶೇಟ್​ ಇದ್ದರು.
Published on

* ಪ್ರಭಾವತಿ ಎಸ್​. ಅಡಿಗ ಅಭಿಪ್ರಾಯ

* ವಿಶ್ವ ಜಲ, ವಾತಾವರಣ ದಿನಾಚರಣೆ

ಉಡುಪಿ: ನಾವು ಬಳಸುತ್ತಿರುವ ಒಂದೊಂದು ಹನಿ ನೀರೂ ಸಹ ಪ್ರಕೃತಿಯ ದುಡಿಮೆಯ ಬೆವರಾಗಿದೆ. ನೀರು ಪೋಲು ಮಾಡಿದರೆ ಮುಂದೆ ಕಣ್ಣೀರು ಹಾಕಬೇಕಾಗುತ್ತದೆ. ಭೂಮಂಡಲದಲ್ಲಿ ಶೇ.72 ಭಾಗ ನೀರು ಆವರಿಸಿಕೊಂಡಿದ್ದರೂ ಕುಡಿಯಲು ಶೇ.3ರಷ್ಟು ಮಾತ್ರ ಯೋಗ್ಯವಾಗಿದೆ. ಅದರಲ್ಲಿ ಶೇ.1ರಷ್ಟು ಕ್ಲೋರೈಡ್​, ಆರ್ಸೆನಿಕ್​ ಮತ್ತು ನೈಟ್ರೇಟ್​ ಪ್ರಮಾಣವಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ ಸುರಕ್ಷಿತ ಮಿತಿ ಮೀರಿದೆ. ಹೀಗಾಗಿ ನೀರಿನ ಸಂರಕ್ಷಣೆ ಕಾರ್ಯ ಅತಿ ಮಹತ್ವದ್ದಾಗಿದೆ ಎಂದು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಎಸ್​. ಅಡಿಗ ಅಭಿಪ್ರಾಯಪಟ್ಟರು.
ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಸೋಮವಾರ (ಮಾ.23) ಆಯೋಜಿಸಿದ್ದ ವಿಶ್ವ ಜಲ ಹಾಗೂ ವಿಶ್ವ ವಾತಾವರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

* ನಾವೆಲ್ಲ ಎಚ್ಚೆತ್ತುಕೊಳ್ಳೋಣ

ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಮಾತನಾಡಿ, ಕೆರೆ-ಬಾವಿಗಳನ್ನು ಮುಚ್ಚಿ ನಾವುಗಳೇ ಕಾಂಕ್ರೀಟ್​ ಕಾಡು ಬೆಳೆಸುತ್ತಿದ್ದೆವೆ. ಜಲ, ವಾಯು ಮಾಲಿನ್ಯದಿಂದ ಪ್ರಾಣಿ&ಪಕ್ಷಿ ಸಂಕುಲ ಸಂಕಷ್ಟಕ್ಕೆ ಒಳಗಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಬಲಿ ತೆಗೆದುಕೊಳ್ಳುತ್ತಿದ್ದಾನೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಜನಾಂಗ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಶಾಲಾ ಶಿಕ್ಷಕಿಯರಾದ ಸುನೀತಾ ಶೇಟ್​, ಜ್ಯೋತಿ ಪ್ರಭು, ದೀಪಾ, ರೂಪಾ, ರಾಘವ ಆಚಾರ್​, ಕನಿಷ್ಕಾ, ವೇದಿಕೆಯ ಸದಸ್ಯರಾದ ಚಂದ್ರಕಲಾ, ಪೂರ್ಣಿಮಾ, ಸಹನಾ, ಸುನೀತಾ, ವನಜಾ, ಕಲ್ಪನಾ, ಸಂಗೀತಾ, ವಿಜಯಾ, ಅಕ್ಷತಾ, ಸುಚಿತ್ರಾ, ವಸಂತ, ವಾಸುದೇವ್​ ಪಿ., ಸುದೇಶ್​ ಪಿ. ರವೀಂದ್ರ ಎನ್​., ಸುರೇಶ್​ ಡಿ., ಅನುರಾಧಾ ಜಿ.ಎಸ್​. ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net