ಫೆ.28ರಂದು ಗುಜರಾತ್​ ರಾಜ್ಯದ ಚಿಕತ್ರಕಲಾ ಕಾರ್ಯಾಗಾರ

ಬಟ್ಟೆಯ ಮೇಲೆ ರಚಿಸಿರುವ ಗುಜರಾತ್​ ರಾಜ್ಯದ 'ಅಲಂಕಾರಿ' ಚಿತ್ರಕಲೆ. (ಸಾಂದರ್ಭಿಕ ಚಿತ್ರ)
ಬಟ್ಟೆಯ ಮೇಲೆ ರಚಿಸಿರುವ ಗುಜರಾತ್​ ರಾಜ್ಯದ 'ಅಲಂಕಾರಿ' ಚಿತ್ರಕಲೆ. (ಸಾಂದರ್ಭಿಕ ಚಿತ್ರ)
Published on

* ಉಡುಪಿಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ

ಉಡುಪಿ: ಭಾವನಾ ಫೌಂಡೇಷನ್​ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಉಡುಪಿಯ ವೆಂಟನಾ ಫೌಂಡೇಷನ್​ ಸಹಯೋಗದಲ್ಲಿ ಜನಪದ ದೇಸೀಯ ಕಲೆಯ ಸರಣಿ ಕಾರ್ಯಾಗಾರದ ನಿಮಿತ್ತ ಫೆ.28 ಮತ್ತು ಮಾ.1ರಂದು ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್​ನ 'ಕಲಂಕಾರಿ' ಹಾಗೂ 'ಮಾತಾ ನೀ ಪಚೇಡಿ' ಚಿತ್ರಕಲೆಯ ಕಾರ್ಯಾಗಾರ ಆಯೋಜಿಸಲಾಗಿದೆ.
ಉಡುಪಿಯ ಬಡಗುಪೇಟೆಯಲ್ಲಿರುವ ವಾಸು ಏಜೆನ್ಸೀಸ್​ ಸಮೀಪದಲ್ಲಿರುವ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಫೆ.28ರಂದು ಬೆಳಗ್ಗೆ 9:30ಕ್ಕೆ ವೆಂಟನಾ ಫೌಂಡೇಷನ್​ನ ಶಿಲ್ಪಾ ಭಟ್​ ಉದ್ಘಾಟಿಸಲಿದ್ದಾರೆ. ಉಡುಪಿ ಸೀರೆಯ ವಸ್ತ್ರ ವಿನ್ಯಾಸಕಿ ಮಮತಾ ರೈ, ಭಾವನಾ ಫೌಂಡೇಷನ್​ನ ನಿರ್ದೇಶಕ ಹಾವಂಜೆ ಮಂಜುನಾಥ್​ ರಾವ್​ ಪಾಲ್ಗೊಳ್ಳಲಿದ್ದಾರೆ. 
ಸರಣಿಯ 18 ಮತ್ತು 19ನೇ ದೇಸೀಯ ಕಲಾ ಕಾರ್ಯಾಗಾರದಲ್ಲಿ ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್​ ರಾಜ್ಯದ ಚಿತ್ರಕಲೆಯ ಕುರಿತು ಕಲಾವಿದ ಜಗದೀಶ್​ ಚಿತ್ತಾರ ತರಬೇತಿ ನೀಡಲಿದ್ದಾರೆ. ಆಸಕ್ತರು ನೋಂದಣಿಗಾಗಿ ಕಾರ್ಯಾಗಾರದ ಸಂಯೋಜಕ, ಕಾವಿ ಕಲೆಯ ಖ್ಯಾತ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ (ಮೊ.ಸಂ. 9845650544) ಅವರನ್ನು ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net