ಲಾರಿ ಹರಿದು ಮಹಿಳೆಗೆ ಗಂಭೀರ ಗಾಯ

ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Crime
crime news
Published on: 

ಕುಂದಾಪುರ: ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಸರ್ಜನ್ ಆಸ್ಪತ್ರೆ ಎದುರುಗಡೆ ರಾ.ಹೆ. 66 ಸರ್ವೀಸ್ ರಸ್ತೆಯಲ್ಲಿ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ರಸ್ತೆ ದಾಟಲು ನಿಂತುಕೊಂಡಿದ್ದ ಯಡಾಡಿ ಮತ್ಯಾಡಿ ಗ್ರಾಮದ ಬೆಮ್ಮರ್ಕಿ ನಿವಾಸಿ ಆಶಾ ಅವರಿಗೆ ಡಿಕ್ಕಿ ಹೊಡೆದಿದೆ. ಆಶಾ ಅವರ ಎಡಕಾಲಿನ ಮೇಲೆ ಟಿಪ್ಪರ್ ಲಾರಿಯ ಚಕ್ರ ಹಾದುಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸರ್ಜನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಗೋಡೌನ್‌ನಲ್ಲಿ ಕಳವು

ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಅಡಿಕೆ ಗೋಡೌನ್ ಒಂದರಲ್ಲಿ 95,000 ರೂ. ಮೌಲ್ಯದ ಅಡಿಕೆ ಕಳವಾಗಿದೆ. ಮಿಯ್ಯಾರ್ ಗ್ರಾಮದ ನಿವಾಸಿ ಎಸ್.ರಮೇಶ್ ಶೆಟ್ಟಿ(76) ಎಂಬುವರಿಗೆ ಸೇರಿದ ಅಡಿಕೆ ಗೋಡೌನ್‌ನಲ್ಲಿ 2026ರ ಆಗಸ್ಟ್ 20ರಿಂದ ಸೆಪ್ಟೆಂಬರ್ 28ರ ನಡುವೆ ಕೃತ್ಯ ನಡೆದಿದೆ. ಗೋಡೌನ್‌ನಲ್ಲಿ ಕೆಲಸ ವಾಡಿಕೊಂಡಿದ್ದ ಗಣಪತಿ ಮತ್ತು ಮಂಜುಳಾ ಎಂಬುವರು ಸುವಾರು 2 ಕ್ವಿಂಟಾಲ್ ಸಿಪ್ಪೆ ಸುಲಿದ ಅಡಿಕೆಯನ್ನು ಕಳವು ವಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net