ಆತ್ಮವಿಶ್ವಾಸವೇ ಕ್ಯಾನ್ಸರ್​ ಮಣಿಸುವ ದೊಡ್ಡ ಶಕ್ತಿ

ಉಡುಪಿ ಮಣಿಪಾಲದಲ್ಲಿ ಕೆಎಂಸಿ ವತಿಯಿಂದ ಕ್ಯಾನ್ಸರ್​ನಿಂದ ಗುಣಮುಖರಾದ ಮಕ್ಕಳು ಮತ್ತು ಅವರ ಪಾಲಕರಿಗಾಗಿ ಆಯೋಜಿಸಿದ್ದ 'ವಿಂಗ್ಸ್​ ಆಫ್​ ಹೋಪ್​' ವಿಶೇಷ ಕಾರ್ಯಕ್ರಮದ ಸ್ಮರಣಾರ್ಥ ರೂಪಶ್ರೀ ವರ್ಕಾಡಿ ಗಿಡ ನೆಟ್ಟರು. ಡಾ. ಸುಧಾಕರ್​ ಕಂಟಿಪುಡಿ, ಡಾ. ಸೀಮಾ ರಾಜೇಶ್​ ರಾವ್​, ಡಾ. ವಾಸುದೇವ್​ ಭಟ್​ ಕೆ., ಡಾ. ಎಮಿನ್​ ಎ. ರಹಿಮಾನ್​, ಡಾ. ಅರ್ಚನಾ ಹಾಗೂ ಮಕ್ಕಳು ಇದ್ದರು.
ಉಡುಪಿ ಮಣಿಪಾಲದಲ್ಲಿ ಕೆಎಂಸಿ ವತಿಯಿಂದ ಕ್ಯಾನ್ಸರ್​ನಿಂದ ಗುಣಮುಖರಾದ ಮಕ್ಕಳು ಮತ್ತು ಅವರ ಪಾಲಕರಿಗಾಗಿ ಆಯೋಜಿಸಿದ್ದ 'ವಿಂಗ್ಸ್​ ಆಫ್​ ಹೋಪ್​' ವಿಶೇಷ ಕಾರ್ಯಕ್ರಮದ ಸ್ಮರಣಾರ್ಥ ರೂಪಶ್ರೀ ವರ್ಕಾಡಿ ಗಿಡ ನೆಟ್ಟರು. ಡಾ. ಸುಧಾಕರ್​ ಕಂಟಿಪುಡಿ, ಡಾ. ಸೀಮಾ ರಾಜೇಶ್​ ರಾವ್​, ಡಾ. ವಾಸುದೇವ್​ ಭಟ್​ ಕೆ., ಡಾ. ಎಮಿನ್​ ಎ. ರಹಿಮಾನ್​, ಡಾ. ಅರ್ಚನಾ ಹಾಗೂ ಮಕ್ಕಳು ಇದ್ದರು.
Published on

* ಖ್ಯಾತ ರಂಗಭೂಮಿ, ಚಿತ್ರನಟಿ ರೂಪಶ್ರೀ ವರ್ಕಾಡಿ ಅಭಿಮತ

* ಕೆಎಂಸಿಯಲ್ಲಿ 'ವಿಂಗ್ಸ್​ ಆಫ್​ ಹೋಪ್​' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಪುಟ್ಟ ಮಕ್ಕಳು ಕ್ಯಾನ್ಸರ್​ಗೆ ತುತ್ತಾಗುವುದು ಯಾರಿಗೂ ಸಹಿಸಲಾಗದ ವಿಚಾರ. ಅಂತಹ ಮಕ್ಕಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿರುವ ಕಸ್ತೂರ್ಬಾ ಆಸ್ಪತ್ರೆಯ ಕಾರ್ಯ ಶ್ಲಾಘನೀಯ. ರೋಗಕ್ಕೆ ತುತ್ತಾಗಿರುವ ಮಕ್ಕಳು ಹಾಗೂ ಅವರ ಪಾಲಕರು ವೈದ್ಯರ ಮೇಲೆ ವಿಶ್ವಾಸವಿಟ್ಟು ಸಹಕರಿಸಬೇಕು. ಅಲ್ಲದೆ, ಗುಣಮುಖರಾದ ಕುಟುಂಬಗಳು ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬಳಿ ತೆರಳಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಅದರಿಂದ ಅವರಿಗೂ ಕ್ಯಾನ್ಸ್​ರ್​ ವಿರುದ್ಧ ಹೋರಾಡಲು ದೊಡ್ಡ ಶಕ್ತಿ ಲಭಿಸುತ್ತದೆ ಎಂದು ಖ್ಯಾತ ರಂಗಭೂಮಿ ಹಾಗೂ ಚಿತ್ರನಟಿ ರೂಪಶ್ರೀ ವರ್ಕಾಡಿ ತಿಳಿಸಿದರು.
ಉಡುಪಿ ಮಣಿಪಾಲದಲ್ಲಿರುವ ಹಾಸ್​ಪೈಸ್​ ಆ್ಯಂಡ್​ ರೆಸ್​ಪೈಸ್​ ಸೆಂಟರ್​ (ಎಂಎಚ್​ಆರ್​ಸಿ)ನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಣಿಪಾಲದ ಮಕ್ಕಳ ಕ್ಯಾನ್ಸರ್​ ವಿಭಾಗದ ವತಿಯಿಂದ ಬಾಲ್ಯ ಕ್ಯಾನ್ಸರ್​ ತಡೆ ಜಾಗೃತಿ ಮಾಸದ ನಿಮಿತ್ತ ಕ್ಯಾನ್ಸರ್​ನಿಂದ ಗುಣಮುಖರಾದ ಮಕ್ಕಳು ಮತ್ತು ಅವರ ಪಾಲಕರಿಗಾಗಿ ಆಯೋಜಿಸಿದ್ದ 'ವಿಂಗ್ಸ್​ ಆಫ್​ ಹೋಪ್​' ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಕ್ಕಳು ನಗುತ್ತಿದ್ದಾರೆ

ಕ್ಯಾನ್ಸರ್​ನಿಂದ ಗುಣಮುಖರಾದ ಐಶ್ವರ್ಯಾ ಹಾಗೂ ಗುಣಮುಖ ಮಗುವಿನ ತಾಯಿ ಶ್ವೇತಾ ಮಾತನಾಡಿ, ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಲು ನಮ್ಮ ಬಳಿ ಪದಗಳೇ ಇಲ್ಲ. ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ವೈದ್ಯರು, ದಾದಿಯರು ಮತ್ತು ಆರೈಕೆದಾರರ ಕರುಣೆ, ಶ್ರಮದಿಂದ ಇಂದು ನಮ್ಮ ಮಕ್ಕಳು ನಗುತ್ತಿದ್ದಾರೆ ಎಂದರು.
ಎಂಎಚ್​ಆರ್​ಸಿ ನಿರ್ದೇಶಕಿ ಡಾ. ಸೀಮಾ ರಾಜೇಶ್​ ರಾವ್​, ಮಕ್ಕಳ ಕ್ಯಾನ್ಸರ್​ ವಿಭಾಗದ ಮುಖ್ಯಸ್ಥ ಡಾ. ವಾಸುದೇವ್​ ಭಟ್​ ಕೆ., ವಿಭಾಗದ 'ಆಫ್ಟರ್​ ಕಂಪ್ಲೀಷನ್​ ಆಫ್​ ಥೆರಪಿ' ಕ್ಲಿನಿಕ್​ನ ಮುಖ್ಯಸ್ಥೆ ಡಾ. ಎಮಿನ್​ ಎ. ರಹಿಮಾನ್​, ಬೋಧಕ ಸಿಬ್ಬಂದಿ, ದಾದಿಯರು, ಆರೈಕೆದಾರರು ಉಪಸ್ಥಿತರಿದ್ದರು.
ಮಕ್ಕಳ ಕ್ಯಾನ್ಸರ್​ ವಿಭಾಗದ ಡಾ. ಅರ್ಚನಾ ಸ್ವಾಗತಿಸಿದರು. ಡಾ. ಸ್ವಾತಿ ವಂದಿಸಿದರು. ಡಾ. ಚೈತ್ರಾ ವೆಂಕಟೇಶ್​ ಕಾರ್ಯಕ್ರಮ ನಿರೂಪಿಸಿದರು. 

ಜೀವಾಪಾಯದಿಂದ ಪಾರಾದ ಮಕ್ಕಳಿಗೆ ಸನ್ಮಾನ

ಕ್ಯಾನ್ಸರ್​ ಪೀಡಿತ ಮಕ್ಕಳಿಗೆ 'ಭರವಸೆ, ಶಕ್ತಿ ಮತ್ತು ನಗು' ಸಂದೇಶದ ಈ ಕಾರ್ಯಕ್ರಮದಲ್ಲಿ ಬಾಲ್ಯ ಕ್ಯಾನ್ಸರ್​ನಿಂದ ಗುಣಮುಖರಾದ 65 ಮಕ್ಕಳು ಹಾಗೂ ಅವರ ಪಾಲಕರು ಪಾಲ್ಗೊಂಡಿದ್ದರು. ಜಾಗೃತಿಯ ಸಂಕೇತವಾಗಿ ಅಳವಡಿಸ್ದ ಚಿನ್ನದ ರಿಬ್ಬನ್​ ಗಮನ ಸೆಳೆಯಿತು. ಕಾಯಿಲೆ ಎದುರಿಸಿ ಜೀವಾಪಾಯದಿಂದ ಪಾರಾದ ಧೀರ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ಮಕ್ಕಳಿಗಾಗಿ ವಿಶೇಷ ಚಟುವಟಿಕೆ ಆಯೋಜಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳಿಗೆ ಕಥೆ ಹೇಳುವ ಗೋಷ್ಠಿ ನಡೆಯಿತು. ಪೀಸ್​ ಕ್ರೇನ್​, 'ಕ್ಯಾನ್ಸರ್​ ನಂತರದ ಬದುಕು' ವಿಷಯದ ಬರವಣಿಗೆ ವಿಚಾರ ಮಂಥನ ಆಯೋಜಿಸಲಾಗಿತ್ತು. "ನಾಳೆ ರಾಜ ಕೋಳಿ ಮಜಾ' ಚಿತ್ರದ ಪ್ರದರ್ಶನ ಪುಟಾಣಿಗಳಲ್ಲಿ ಸಂಭ್ರಮ ಇಮ್ಮಡಿಗೊಳಿಸಿತು.
"

ಕೆಎಂಸಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುವು ಪ್ರತಿ ಮಕ್ಕಳದ್ದೂ ಅಸಾಧಾರಣ ಧೈರ್ಯದ ಕಥೆಯಾಗಿದೆ. ಕುಟುಂಬದ ಸಮರ್ಪಣೆ, ನಮ್ಮ ವೈದ್ಯಕೀಯ ತಂಡಗಳ ಅವಿಶ್ರಾಂತ ಬದ್ಧತೆಗೆ 'ವಿಂಗ್ಸ್​ ಆಫ್​ ಹೋಪ್​' ನಿದರ್ಶನವಾಗಿದೆ. ಕ್ಯಾನ್ಸರ್​ ಪೀಡಿತ ಮಕ್ಕಳ ಪ್ರತಿ ಕುಟುಂಬಕ್ಕೂ 'ನೀವು ಈ ಪಯಣದಲ್ಲಿ ಒಂಟಿಯಲ್ಲ' ಎನ್ನುವ ಭರವಸೆ ನೀಡುವುದು, ಮಕ್ಕಳ ಆರೈಕೆಗೆ ಕರುಣಾಪೂರ್ಣ ಹಾಗೂ ವಿಶ್ವದರ್ಜೆಯ ಸೇವೆ ನೀಡುವುದು ಸದಾ ನಮ್ಮ ಬದ್ಧತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net