ಪ್ರಕೃತಿಯೇ ಸಂಭ್ರಮಿಸುವ ಹಬ್ಬ ಯುಗಾದಿ

ಹೆಬ್ರಿಯ ಸರ್ಕಾರಿ ಕಾಲೇಜ್​ನಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವವನ್ನು ಪ್ರೊ. ಡಾ.ಚಂದ್ರಕಾಂತ ಭಟ್​ ಉದ್ಘಾಟಿಸಿದರು. ಡಾ. ವಿದ್ಯಾಧರ್​ ಹೆಗಡೆ, ಡಾ.ಭೈರವಿ ಪಂಡ್ಯಾ, ಡಾ.ಗಣೇಶ್​ ಎಸ್​., ಡಾ. ಸುರೇಂದ್ರ ಶೆಟ್ಟಿ, ಮುರಳಿ ಕೃಷ್ಣ, ಸುಷ್ಮಾ ರಾವ್​ ಇದ್ದರು.
ಹೆಬ್ರಿಯ ಸರ್ಕಾರಿ ಕಾಲೇಜ್​ನಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವವನ್ನು ಪ್ರೊ. ಡಾ.ಚಂದ್ರಕಾಂತ ಭಟ್​ ಉದ್ಘಾಟಿಸಿದರು. ಡಾ. ವಿದ್ಯಾಧರ್​ ಹೆಗಡೆ, ಡಾ.ಭೈರವಿ ಪಂಡ್ಯಾ, ಡಾ.ಗಣೇಶ್​ ಎಸ್​., ಡಾ. ಸುರೇಂದ್ರ ಶೆಟ್ಟಿ, ಮುರಳಿ ಕೃಷ್ಣ, ಸುಷ್ಮಾ ರಾವ್​ ಇದ್ದರು.
Published on

* ಪ್ರಾಂಶುಪಾಲ ಪ್ರೊ. ಡಾ.ಚಂದ್ರಕಾಂತ ಭಟ್​ ಅನಿಸಿಕೆ

ಹೆಬ್ರಿ ಸ.ಪ್ರ. ದ. ಕಾಲೇಜ್​ನಲ್ಲಿ ಯುಗಾದಿ ಉತ್ಸವ ಆಚರಣೆ

ಉಡುಪಿ: ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ  ಸೇರಿ ಆಚರಿಸುವ ಒಂದು ವಿಶೇಷ ಹಬ್ಬ ಯುಗಾದಿ. ಪ್ರಕೃತಿಯೊಂದಿಗೇ ನಮ್ಮೆಲ್ಲರ ಬದುಕಿದೆ ಎನ್ನುವುದನ್ನು ಅನಾದಿಕಾಲದಿಂದಲೂ ಪಾಲಿಸಿಕೊಂಡುಬಂದ ಸಿದ್ಧಾಂತ ಇದಾಗಿದೆ. ಪ್ರಕೃತಿಯೇ ಸಂಭ್ರಮಿಸುವ ಹಬ್ಬ -ಯುಗಾದಿ. ಪೌರಾಣಿಕ, ಐತಿಹಾಸಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯ ಸತ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್​ನ ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್​ ಸಲಹೆ ನೀಡಿದರು.
ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಹೆಬ್ರಿ ಕಾಲೇಜ್​ನ ಪ್ರಾಂಶುಪಾಲ ಡಾ. ವಿದ್ಯಾಧರ್​ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಷ್ಮಾ ರಾವ್​ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಡಾ.ಭೈರವಿ ಪಂಡ್ಯಾ ಸ್ವಾಗತಿಸಿದರು. ಕಾಲೇಜ್​ನ ಐಕ್ಯುಎಸಿ ಘಟಕದ ಸಂಯೋಜಕ ಡಾ.ಗಣೇಶ್​ ಎಸ್​. ವಂದಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.
"

ಋತುಗಳಿಗೆ ಅನ್ವಯವಾಗಿ ನಡೆಯುವ ಯುಗಾದಿ ಹಬ್ಬವು ಹಲವು ಸಂಗತಿಗಳಿಗೆ ಮುನ್ನುಡಿಯಾಗಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ ಆಗಿರುವ ಇಂಥ ಹಬ್ಬಗಳು ವಿಶ್ವಕ್ಕೆ ಭಾರತದ ಬಹುದೊಡ್ಡ ಸಂದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net