ಕರ್ನಾಟಕ ಕ್ರಿಕೆಟ್​ ತಂಡಕ್ಕೆ ಉಡುಪಿಯ ನಿಶ್ಚಿತ್ ಎನ್​. ಪೈ​ ಆಯ್ಕೆ

ಕರ್ನಾಟಕ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾಗಿರುವ ಉಡುಪಿಯ ನಿಶ್ಚಿತ್​ ಎನ್​. ಪೈ.
ಕರ್ನಾಟಕ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾಗಿರುವ ಉಡುಪಿಯ ನಿಶ್ಚಿತ್​ ಎನ್​. ಪೈ.
Published on: 

* ಬಿಸಿಸಿಐ ಮೆನ್ಸ್​ ಅಂಡರ್​-23ರ ಟಿ-20 ಟ್ರೋಫಿ

ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​, ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬೆಂಗಳೂರು ವತಿಯಿಂದ ನಡೆದ ಬಿಸಿಸಿಐ ಅಂಡರ್​-23 ಕ್ರಿಕೆಟ್​ ತಂಡದ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕ ತಂಡಕ್ಕೆ ಉಡುಪಿಯ ನಿಶ್ಚಿತ್​ ಎನ್​. ಪೈ ಆಯ್ಕೆಯಾಗಿದ್ದಾರೆ.

ಹೈದರಬಾದ್​ನಲ್ಲಿ ಡಿ.1ರಿಂದ 13ರ ವರೆಗೆ ನಡೆಯಲ್ಲಿರುವ 'ಬಿಸಿಸಿಐ ಮೆನ್ಸ್​ ಅಂಡರ್​-23ರ ಟಿ-20 ಟ್ರೋಫಿ- 2026-27ನೇ ಸಾಲಿನ ಕ್ರಿಕೆಟ್​ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸುವ ತಂಡದಲ್ಲಿ ಉಡುಪಿಯ ನಿಶ್ಚಿತ್​ ಪೈ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಬಿಸಿಸಿಐ ಆಯೋಜಿಸಿದ್ದ ಮೆನ್ಸ್​ ಅಂಡರ್​-19ರ ವಿಭಾಗದ ಕ್ರಿಕೆಟ್​ ಟೂರ್ನಿಯಲ್ಲೂ ಸಹ ನಿಶ್ಚಿತ್​ ಉತ್ತಮ ಸಾಧನೆ ಮಾಡಿದ್ದರು. ಇವರು ಉಡುಪಿಯ ಕೆ.ನಾಗರಾಜ ಪೈ ಹಾಗೂ ಉಜ್ವಲಾ ಕಿರಣ ದಂಪತಿಯ ಪುತ್ರರಾಗಿದ್ದಾರೆ.