ಉಡುಪಿ ಜಿಪಂ, ತಾಪಂ ಮೀಸಲಾತಿ ಕರಡು ಅಧಿಸೂಚನೆ ಪ್ರಕಟ

ಜಿಲ್ಲಾ ಪಂಚಾಯಿತಿ 28 ಸ್ಥಾನಗಳಿಗೆ ಹಾಗೂ 7 ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಾರ್ವಜನಿಕರು ಅಥವಾ ಮತದಾರರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅ.19ರೊಳಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿದೆ.
ಉಡುಪಿ ಜಿಪಂ, ತಾಪಂ ಮೀಸಲಾತಿ ಕರಡು ಅಧಿಸೂಚನೆ ಪ್ರಕಟ
Published on: 

ಉಡುಪಿ: ಜಿಲ್ಲಾ ಪಂಚಾಯಿತಿ 28 ಸ್ಥಾನಗಳಿಗೆ ಹಾಗೂ 7 ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಾರ್ವಜನಿಕರು ಅಥವಾ ಮತದಾರರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅ.19ರೊಳಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿದೆ.

ತ್ರಾಸಿ, ವಂಡ್ಸೆ, ಬೀಜಾಡಿ, ಹಾಲಾಡಿ, ಕೋಟ, ಮರ್ಣೆ, ಉದ್ಯಾವರ, ಎಲ್ಲೂರು, ಬೆಳ್ಳಣ್ಣು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಶಿರೂರು ಕ್ಷೇತ್ರ ಹಿಂದುಳಿದ 'ಅ' ವರ್ಗ, ಚಾರ ಹಿಂದುಳಿದ 'ಬಿ' ವರ್ಗ, ಕೊಲ್ಲೂರು ಕ್ಷೇತ್ರವನ್ನು ಸಾಮಾನ್ಯ (ಮಹಿಳೆ), ಕಂಬದಕೋಣೆ ಕ್ಷೇತ್ರ ಹಿಂದುಳಿದ 'ಅ' ವರ್ಗ (ಮಹಿಳೆ), ಸಿದ್ಧಾಪುರ ಸಾಮಾನ್ಯ (ಮಹಿಳೆ), ಕಾವ್ರಾಡಿ ಅನುಸೂಚಿತ ಜಾತಿ, ಕೋಟೇಶ್ವರ ಹಿಂದುಳಿದ 'ಅ' ವರ್ಗ (ಮಹಿಳೆ), ಶಿರಿಯಾರ ಹಿಂದುಳಿದ 'ಅ' ವರ್ಗ (ಮಹಿಳೆ), ಮಂದಾರ್ತಿ ಸಾಮಾನ್ಯ (ಮಹಿಳೆ), ಉಪ್ಪೂರು ಅನುಸೂಚಿತ ಪಂಗಡ (ಮಹಿಳೆ), ಬ್ರಹ್ಮಾವರ ಸಾಮಾನ್ಯ (ಮಹಿಳೆ), ಪೆರ್ಡೂರು ಹಿಂದುಳಿದ 'ಅ' ವರ್ಗ, 80-ಬಡಗಬೆಟ್ಟು ಸಾಮಾನ್ಯ (ಮಹಿಳೆ), ಕಲ್ಯಾಣಪುರ ಸಾಮಾನ್ಯ (ಮಹಿಳೆ), ಹೆಬ್ರಿ ಸಾಮಾನ್ಯ (ಮಹಿಳೆ), ಶಿರ್ವ ಹಿಂದುಳಿದ ವರ್ಗ "ಬಿ' ಮಹಿಳೆ, ಪಡುಬಿದ್ರಿ ಹಿಂದುಳಿದ 'ಅ' ವರ್ಗ (ಮಹಿಳೆ), ಬೈಲೂರು ಹಿಂದುಳಿದ 'ಅ' ವರ್ಗ ಹಾಗೂ ಮಿಯಾರು ಕ್ಷೇತ್ರ ಅನುಸೂಚಿತ ಜಾತಿ (ಮಹಿಳೆ) ವರ್ಗಕ್ಕೆ ಮೀಸಲಿರಿಸಲಾಗಿದೆ.

ಬೈಂದೂರು ತಾಲೂಕು ಪಂಚಾಯಿತಿ

ಬೈಂದೂರು ತಾಲೂಕು ಪಂಚಾಯಿತಿಯಲ್ಲಿ 11 ಕ್ಷೇತ್ರ ನಿಗದಿ ಮಾಡಲಾಗಿದೆ. ಉಪ್ಪುಂದ, -ಕಿರಿಮಂಜೇಶ್ವರ ಹಾಗೂ ಶೀರೂರು&1, ನಾಡ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. -ಕಂಬದಕೋಣೆ ಮತ್ತು -ನಾವುಂದ ಕ್ಷೇತ್ರ ಸಾಮಾನ್ಯ (ಮಹಿಳೆ), ಶಿರೂರು-&2 ಕ್ಷೇತ್ರ ಹಿಂದುಳಿದ 'ಎ' ವರ್ಗಕ್ಕೆ, -ಹೇರೂರು ಹಿಂದುಳಿದ 'ಎ' ವರ್ಗ (ಮಹಿಳೆ) ಹಾಗೂ ಕಾಲ್ತೋಡು ಕ್ಷೇತ್ರ ಹಿಂದುಳಿದ 'ಬಿ' ವರ್ಗ (ಮಹಿಳೆ) ಪಾಲಾಗಿವೆ. ಬಿಜೂರು ಅನುಸೂಚಿತ ಜಾತಿ (ಮಹಿಳೆ) ಹಾಗೂ -ಕೊಲ್ಲೂರು ಅನುಸೂಚಿತ ಪಂಗಡ (ಮಹಿಳೆ) ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ಕುಂದಾಪುರ ತಾಲೂಕು ಪಂಚಾಯಿತಿ

ಕುಂದಾಪುರ ತಾಪಂನಲ್ಲಿ 20 ಕ್ಷೇತ್ರಗಳಿವೆ. ತ್ರಾಸಿ, -ಹೆಮ್ಮಾಡಿ, ಹಾರ್ದಳ್ಳಿ-ಮಂಡಳ್ಳಿ, -ಅಮಾಸೆಬೈಲು ಮತ್ತು ಬೇಳೂರು, ಬೀಜಾಡಿ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. ಹೊಸಾಡು, -ಸಿದ್ದಾಪುರ, ಕೋಟೇಶ್ವರ ಹಾಗೂ -ಮೊಳಹಳ್ಳಿ ಕ್ಷೇತ್ರ ಸಾಮಾನ್ಯ (ಮಹಿಳೆ) ವರ್ಗಕ್ಕೆ ನಿಗದಿಪಡಿಸಲಾಗಿದೆ. ವಂಡ್ಸೆ, ಶಂಕರನಾರಾಯಣ, ಗಂಗೊಳ್ಳಿ ಹಾಗೂ ಬಸ್ರೂರು ಹಿಂದುಳಿದ 'ಎ' ವರ್ಗ, -ಕೆರಾಡಿ, -ಕಾವ್ರಾಡಿ ಮತ್ತು -ಕುಂಭಾಶಿ ಕ್ಷೇತ್ರ ಹಿಂದುಳಿದ 'ಎ' (ಮಹಿಳೆ), ಹಂಗಳೂರು ಕ್ಷೇತ್ರ ಹಿಂದುಳಿದ 'ಬಿ' ವರ್ಗ (ಮಹಿಳೆ), -ತಲ್ಲೂರು ಕ್ಷೇತ್ರ ಅನುಸೂಚಿತ ಜಾತಿ (ಮಹಿಳೆ) ಹಾಗೂ ಆಜ್ರಿ ಕ್ಷೇತ್ರ ಅನುಸೂಚಿತ ಪಂಗಡ (ಮಹಿಳೆ) ವರ್ಗಕ್ಕೆ ಕಾಯ್ದಿರಿಸಲ್ಪಟ್ಟಿವೆ.

ಬ್ರಹ್ಮಾವರ ತಾಲೂಕು ಪಂಚಾಯಿತಿ

ಬ್ರಹ್ಮಾವರ ತಾಲೂಕಿನಲ್ಲಿ 16 ಕ್ಷೇತ್ರಗಳಿವೆ. -ಕೆಂಜೂರು, -ಚಾಂತಾರು, -ಬಾರ್ಕೂರು, -ಹಂದಾಡಿ, ವಾರಂಬಳ್ಳಿ ಹಾಗೂ ಹಾರಾಡಿ ಕ್ಷೇತ್ರಗಳು ಸಾಮಾನ್ಯ ವರ್ಗ, ಮಣೂರು, ಕೋಟ ಹಾಗೂ -ಹಿಲಿಯಾಣ ಕ್ಷೇತ್ರಗಳು ಸಾಮಾನ್ಯ (ಮಹಿಳೆ) ವರ್ಗ, ಕಾಡೂರು, ಮತ್ತು ಕೊಕ್ಕರ್ಣೆ ಕ್ಷೇತ್ರಗಳು ಹಿಂದುಳಿದ 'ಎ' ವರ್ಗ, -ಐರೋಡಿ ಹಾಗೂ -ನಾಲ್ಕೂರು ಹಿಂದುಳಿದ 'ಅ' ವರ್ಗ (ಮಹಿಳೆ),, ಶಿರಿಯಾರ ಕ್ಷೇತ್ರ ಹಿಂದುಳಿದ 'ಬ' ವರ್ಗ (ಮಹಿಳೆ), ಉಪ್ಪೂರು ಕ್ಷೇತ್ರ ಅನುಸೂಚಿತ ಜಾತಿ (ಮಹಿಳೆ) ಹಾಗೂ ಚೇರ್ಕಾಡಿ ಕ್ಷೇತ್ರ ಅನುಸೂಚಿತ ಪಂಗಡ (ಮಹಿಳೆ) ಅಭ್ಯರ್ಥಿಗಳಿಗೆ ಮೀಸಲಾಗಿದೆ.

ಉಡುಪಿ ತಾಲೂಕು ಪಂಚಾಯಿತಿ

ಉಡುಪಿ ತಾಲೂಕಿನಲ್ಲಿ 13 ಕ್ಷೇತ್ರಗಳಿವೆ. -80 ಬಡಗಬೆಟ್ಟು, ಮಣಿಪುರ, ಉದ್ಯಾವರ, ಕಡೆಕಾರು ಸಾಮಾನ್ಯ ವರ್ಗ, ಬೈರಂಪಳ್ಳಿ, ನಿಡಂಬೂರು ಹಾಗೂ ತೋನ್ಸೆ ಕ್ಷೇತ್ರಗಳನ್ನು ಸಾಮಾನ್ಯ (ಮಹಿಳೆ), ತೆಂಕನಿಡಿಯೂರು ಕ್ಷೇತ್ರ ಹಿಂದುಳಿದ 'ಎ' ವರ್ಗಕ್ಕೆ, -ಬೊಮ್ಮರಬೆಟ್ಟು ಮತ್ತು -ಕಲ್ಯಾಣಪುರ ಕ್ಷೇತ್ರಗಳು ಹಿಂದುಳಿದ 'ಎ' ವರ್ಗ (ಮಹಿಳೆ) ಹಾಗೂ -ಅಂಜಾರು ಹಿಂದುಳಿದ 'ಬಿ' ವರ್ಗ, ಅಲೆವೂರು ಅನುಸೂಚಿತ ಜಾತಿ (ಮಹಿಳೆ) ಹಾಗೂ -ಪೆರ್ಡೂರು ಅನುಸೂಚಿತ ಪಂಗಡ (ಮಹಿಳೆ) ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ಕಾಪು ತಾಲೂಕು ಪಂಚಾಯಿತಿ

ಕಾಪು ತಾಲೂಕಿನಲ್ಲಿ 12 ಕ್ಷೇತ್ರಗಳಿವೆ. ಬೆಳ್ಳೆ, ಕಟಪಾಡಿ, ಎಲ್ಲೂರು ಹಾಗೂ -ಮುದರಂಗಡಿ ಕ್ಷೇತ್ರಗಳು ಸಾಮಾನ್ಯ ವರ್ಗ, ಶಂಕರಪುರ ಹಾಗೂ -ಹೆಜಮಾಡಿ ಸಾಮಾನ್ಯ (ಮಹಿಳೆ), 108 ಕಳತ್ತೂರು ಕ್ಷೇತ್ರವು ಹಿಂದುಳಿದ 'ಎ' ವರ್ಗ ಮತ್ತು ಕೋಟೆ, ಉಚ್ಚಿಲ ಹಿಂದುಳಿದ 'ಅ' ವರ್ಗ (ಮಹಿಳೆ), ಫಲಿಮಾರು ಕ್ಷೇತ್ರ ಹಿಂದುಳಿದ 'ಬಿ' ವರ್ಗಕ್ಕೆ, -ಪಡುಬಿದ್ರೆ ಕ್ಷೇತ್ರ ಅನುಸೂಚಿತ ಜಾತಿ (ಮಹಿಳೆ) ಹಾಗೂ ಶಿರ್ವ ಕ್ಷೇತ್ರ ಅನುಸೂಚಿತ ಪಂಗಡ (ಮಹಿಳೆ) ವರ್ಗಕ್ಕೆ ನಿಗದಿಪಡಿಸಲಾಗಿದೆ.

ಹೆಬ್ರಿ ತಾಲೂಕು ಪಂಚಾಯಿತಿ

ಹೆಬ್ರಿಯಲ್ಲಿ 7 ಕ್ಷೇತ್ರಗಳಿವೆ. ಹೆಬ್ರಿ, ಶಿವಪುರ ಹಾಗೂ ಶೇಡಿಮನೆ ಕ್ಷೇತ್ರಗಳು ಸಾಮಾನ್ಯ ವರ್ಗ, ಬೆಳ್ವೆ ಕ್ಷೇತ್ರವನ್ನು ಸಾಮಾನ್ಯ (ಮಹಿಳೆ) ವರ್ಗ, ಮುದ್ರಾಡಿ ಕ್ಷೇತ್ರವನ್ನು ಹಿಂದುಳಿದ 'ಅ' ವರ್ಗ (ಮಹಿಳೆ), ವರಂಗ ಕ್ಷೇತ್ರವನ್ನು ಅನುಸೂಚಿತ ಜಾತಿ (ಮಹಿಳೆ) ಹಾಗೂ ಚಾರ ಅನುಸೂಚಿತ ಪಂಗಡ (ಮಹಿಳೆ) ವರ್ಗಕ್ಕೆ ಕಾಯ್ದಿರಿಸಲಾಗಿದೆ.

ಕಾರ್ಕಳ ತಾಲೂಕು ಪಂಚಾಯಿತಿ

ಕಾರ್ಕಳ ತಾಲೂಕಿನಲ್ಲಿ 16 ಕ್ಷೇತ್ರಗಳಿವೆ. ಕೌಡೂರು, ಕೆರ್ವಾಶ, ಮುಡಾರು, ನಿಟ್ಟೆ ಮತ್ತು ಮುಂಡ್ಕೂರು ಕ್ಷೇತ್ರಗಳು ಸಾಮಾನ್ಯ ವರ್ಗ, ಹಿರ್ಗಾನ, ಕುಕ್ಕುಂದೂರು ಹಾಗೂ ಬೋಳ ಸಾಮಾನ್ಯ (ಮಹಿಳೆ), ಕಡ್ತಲ ಮತ್ತು ಕಲ್ಯಾ ಕ್ಷೇತ್ರಗಳು ಹಿಂದುಳಿದ 'ಅ' ವರ್ಗ, ಬೆಳ್ಳಣ್​ ಹಾಗೂ ನಲ್ಲೂರು ಕ್ಷೇತ್ರಗಳು ಹಿಂದುಳಿದ 'ಅ' ವರ್ಗ (ಮಹಿಳೆ), -ಸಾಣೂರು ಕ್ಷೇತ್ರವನ್ನು ಹಿಂದುಳಿದ 'ಬಿ' ವರ್ಗ (ಮಹಿಳೆ), ಮಿಯ್ಯಾರು ಅನುಸೂಚಿತ ಜಾತಿ, -ಮಾಳ ಕ್ಷೇತ್ರವನ್ನು ಅನುಸೂಚಿತ ಜಾತಿ (ಮಹಿಳೆ) ಹಾಗೂ -ಮರ್ಣೆ ಕ್ಷೇತ್ರವನ್ನು ಅನುಸೂಚಿತ ಪಂಗಡ (ಮಹಿಳೆ) ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net