ಎಲ್ಲರ ಕರ್ತವ್ಯವಾಗಲಿ ಗೋವುಗಳ ರಕ್ಷಣೆ

ಉಡುಪಿ ಜಿಲ್ಲೆ ಬ್ರಹ್ಮಾವರದ ನಂಚಾರುನಲ್ಲಿರುವ ಕಾಮಧೇನು ಗೋಶಾಲಾ ಟ್ರಸ್ಟ್​ನಲ್ಲಿ ನಿರ್ಮಿಸಿರುವ ಸ್ಲರಿ ಪಾಟ್​ಅನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ರಾಜೇಂದ್ರ ಚೆಕ್ಕೆರ, ಪ್ರತಾಪ್​ ಹೆಗಡೆ ಮಾರಾಳಿ, ಸತೀಶ್​ ಶೆಟ್ಟಿ ನಂಚಾರು, ಹರೀಶ್​ ಆಚಾರ್ಯ, ಶಶಿಧರ ಭಟ್​, ಡಾ. ಎಂ.ಸಿ. ರೆಡ್ಡಪ್ಪ ಇತರರಿದ್ದರು.
ಉಡುಪಿ ಜಿಲ್ಲೆ ಬ್ರಹ್ಮಾವರದ ನಂಚಾರುನಲ್ಲಿರುವ ಕಾಮಧೇನು ಗೋಶಾಲಾ ಟ್ರಸ್ಟ್​ನಲ್ಲಿ ನಿರ್ಮಿಸಿರುವ ಸ್ಲರಿ ಪಾಟ್​ಅನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ರಾಜೇಂದ್ರ ಚೆಕ್ಕೆರ, ಪ್ರತಾಪ್​ ಹೆಗಡೆ ಮಾರಾಳಿ, ಸತೀಶ್​ ಶೆಟ್ಟಿ ನಂಚಾರು, ಹರೀಶ್​ ಆಚಾರ್ಯ, ಶಶಿಧರ ಭಟ್​, ಡಾ. ಎಂ.ಸಿ. ರೆಡ್ಡಪ್ಪ ಇತರರಿದ್ದರು.
Published on

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ

ಬ್ರಹ್ಮಾವರದ ಕಾಮಧೇನು ಗೋಶಾಲೆಯಲ್ಲಿ ಗೋಗ್ರಾಸ ಸೇವೆ

ಉಡುಪಿ: ರಾಜೇಂದ್ರ ಚೆಕ್ಕೆರ ಅವರು ಲಾಭ ರಹಿತ ಹಾಗೂ ನಿರುಪಯುಕ್ತವಾದ 370 ಗೋಮಾತೆಯರ ಸಂರಕ್ಷಣೆಯ ಮಹಾ ಕಾರ್ಯ ಕೈಗೊಂಡಿದ್ದಾರೆ. ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಗಳ ಸಹಕಾರ ಇಲ್ಲದೆ ಮಾಡುತ್ತಿರುವ ಈ ಕಾರ್ಯಕ್ಕೆ ಗೋ ಗ್ರಾಸ ತಂಡ ಉಡುಪಿ ಹಾಗೂ ಇನ್ನಿತರ ದಾನಿಗಳ ಸಹಕಾರ ಹೀಗೆಯೇ ಮುಂದುವರಿಯಲಿ. ಗೋವುಗಳ ರಕ್ಷಣೆ ಎಲ್ಲರ ಕರ್ತವ್ಯವಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.

ಬ್ರಹ್ಮಾವರದ ನಂಚಾರುನಲ್ಲಿರುವ ಕಾಮಧೇನು ಗೋಶಾಲಾ ಟ್ರಸ್ಟ್​ನಲ್ಲಿ ಉಡುಪಿಯ ಗೋ ಗ್ರಾಸ ತಂಡ ಮತ್ತು ಹರೀಶ್​ ಆಚಾರ್ಯ ನೇತೃತ್ವದಲ್ಲಿ 370 ಗೋವುಗಳಿಗೆ ಗೋಗ್ರಾಸ ಸೇವೆ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಕ್ಕರ್ಣೆ ಕ್ರಿಯೇಟಿವ್​ ಕ್ಲಬ್​ (ರಿ.) ವತಿಯಿಂದ ಗೋವುಗಳನ್ನು ದಾನ ಸ್ವೀಕರಿಸುವ ಸಾಂಕೇತಿಕ ಕಾರ್ಯಕ್ಕೆ ಅಧ್ಯಕ್ಷ ಸುನೀಲ್​ ಚಾಲನೆ ನೀಡಿದರು. ಇದೇ ವೇಳೆ ಉಡುಪಿಯ ಗೋ ಗ್ರಾಸ ತಂಡದವರು 1.52 ಲಕ್ಷ ರೂ. ದೇಣಿಗೆ ನೀಡಿದರು. ಗೋಶಾಲೆಗೆ ಶ್ರೀಕಾಂತ್​ ಶೆಟ್ಟಿ ವಂಡಾರು ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಸ್ಲರಿ ಪಾಟ್​ ಉದ್ಘಾಟಿಸಲಾಯಿತು.

ಜಿಪಂ ಮಾಜಿ ಸದಸ್ಯ ಪ್ರತಾಪ್​ ಹೆಗಡೆ ಮಾರಾಳಿ, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್​ ಶೆಟ್ಟಿ ನಂಚಾರು, ಗೋ ಗ್ರಾಸ ತಂಡದ ಶಶಿಧರ ಭಟ್​ ಹಾಗೂ ತಂಡದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ, ಜಿಲ್ಲಾ ಗೋ ಸಂಜೀವಿನಿ ಯೋಜನೆಯ ನೋಡಲ್​ ಅಧಿಕಾರಿ ಸರ್ವೋತ್ತಮ ಉಡುಪ, ತಾಲೂಕು ಮುಖ್ಯಸ್ಥ ಉದಯಕುಮಾರ್​ ಶೆಟ್ಟಿ, ಪಶುವೈದ್ಯ ಮಂಜುನಾಥ್​ ಅಡಿಗ ಇತರರು ಪಾಲ್ಗೊಂಡಿದ್ದರು.

ಟ್ರಸ್ಟ್​ನ ಅಧ್ಯಕ್ಷ ರಾಜೇಂದ್ರ ಚೆಕ್ಕೆರ ಸ್ವಾಗತಿಸಿದರು. ಶಿಕ್ಷಕ ಶಶಿಧರ್​ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು. ಗೋ ಭಕ್ತರ ಸಹಕಾರದಲ್ಲಿ ವಿವಿಧ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net