ಜಾಗತಿಕ ಶೈಕ್ಷಣಿಕ ರ್ಯಾಂಕಿಂಗ್​ನಲ್ಲಿ ಮಾಹೆ ಸಾಧನೆ

ಉಡುಪಿ ಮಣಿಪಾಲದಲ್ಲಿರುವ ಮಾಹೆ ಸಂಸ್ಥೆ.
ಉಡುಪಿ ಮಣಿಪಾಲದಲ್ಲಿರುವ ಮಾಹೆ ಸಂಸ್ಥೆ.
Published on

* ಕುಲಪತಿ ಡಾ. ಶರತ್​ ಕೆ. ರಾವ್​ ಮಾಹಿತಿ

*  ದೇಶದಲ್ಲಿ 7ನೇ ಸ್ಥಾನಕ್ಕೇರಿದ ಶಿಕ್ಷಣ ಸಂಸ್ಥೆ

ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ) ವಿಶ್ವವಿದ್ಯಾಲಯವು ಜಾಗತಿಕ ಶೈಕ್ಷಣಿಕ ಮಟ್ಟದಲ್ಲಿ ಮತ್ತೊಂದು 

ಮೈಲಿಗಲ್ಲು ತಲುಪಿದೆ. ಶಾಂಘೈ ರ್ಯಾಂಕಿಂಗ್​ ಕನ್ಸಲ್ಟೆನ್ಸಿಯ 2026ನೇ ಸಾಲಿನ ಪ್ರತಿಷ್ಠಿತ 'ಅಕಾಡೆಮಿಕ್​ ರ್ಯಾಂಕಿಂಗ್​ ಆಫ್​ ವರ್ಲ್ಡ್​ ಯೂನಿವರ್ಸಿಟೀಸ್​' (ಎಆರ್​ಡಬ್ಲ್ಯುಯು) ಪಟ್ಟಿಯಲ್ಲಿ ಮಾಹೆಯು 701-800ರ ಶ್ರೇಣಿಗೆ ಏರಿದೆ ಎಂದು ಕುಲಪತಿ ಡಾ. ಶರತ್​ ಕೆ. ರಾವ್​ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿ 801-900ರ ಶ್ರೇಣಿಯಲ್ಲಿತ್ತು. ಇದೀಗ ಶೈಕ್ಷಣಿಕ ಹಾಗೂ ಸಂಶೋಧನಾ ವಲಯದಲ್ಲಿನ ನಿರಂತರ ಸಾಧನೆಯಿಂದಾಗಿ ವಿಶ್ವಮಟ್ಟದ ಸ್ಥಾನದಲ್ಲಿ ಮತ್ತಷ್ಟು ಸಾಧನೆ ಹಾಗೂ ಪ್ರಗತಿ ಕಂಡಿದೆ ಎಂದು ತಿಳಿಸಿದ್ದಾರೆ.

ಸ್ಥಾನದಲ್ಲಿ ಮುನ್ನಡೆ

ಎಆರ್​ಡಬ್ಲ್ಯುಯು ಟ್ರ್ಯಾಕರ್​ ವಿಶ್ಲೇಷಣೆ ಪ್ರಕಾರ ಮಾಹೆಯು ಜಾಗತಿಕವಾಗಿ ಪ್ರಸ್ತುತ 779ನೇ ಮತ್ತು ಭಾರತದಲ್ಲಿ 7ನೇ ಸ್ಥಾನದಲ್ಲಿದೆ. ಇದು 2025ರ ರ್ಯಾಂಕಿಂಗ್​ಗೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ 36ನೇ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಮುನ್ನಡೆ ಸಾಧಿಸಿದೆ.
ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಆದ್ಯತೆ ಹಾಗೂ ಬದ್ಧತೆಗೆ ಇದು ಕನ್ನಡಿಯಾಗಿದೆ. ಜ್ಞಾನ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಭಿನ್ನ ಸಂಶೋಧನೆಗಳಿಗೆ ವಿವಿ ನೀಡುತ್ತಿರುವ ಪ್ರೋತ್ಸಾಹವೂ ಮತ್ತೊಮ್ಮೆ ಸಾಬೀತಾಗಿದೆ. ಈ ಮುನ್ನಡೆಗೆ ನಮ್ಮ ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಿಬ್ಬಂದಿ ಶ್ರಮವೇ ಕಾರಣವಾಗಿದೆ. ಇದು ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಮಗೆ ಪ್ರೇರಣೆಯಾಗಿದೆ ಎಂದು ಡಾ. ಶರತ್​ ಕೆ. ರಾವ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net