ಪೊಲೀಸ್​ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲೆ ಸಾಧನೆ

ಬೆಂಗಳೂರಿನಲ್ಲಿ ನಡೆದ ಪೊಲೀಸ್​ ಕರ್ತವ್ಯ ಕೂಟದಲ್ಲಿ ಸಾಧನೆ ಮಾಡಿದ ಉಡುಪಿ ಜಿಲ್ಲೆಯ ಆರ್​ಎಸ್​ಐ ಗಿರೀಶ್​ ಪ್ರಶಸ್ತಿಪತ್ರ ಸ್ವೀಕರಿಸಿದರು.
ಬೆಂಗಳೂರಿನಲ್ಲಿ ನಡೆದ ಪೊಲೀಸ್​ ಕರ್ತವ್ಯ ಕೂಟದಲ್ಲಿ ಸಾಧನೆ ಮಾಡಿದ ಉಡುಪಿ ಜಿಲ್ಲೆಯ ಆರ್​ಎಸ್​ಐ ಗಿರೀಶ್​ ಪ್ರಶಸ್ತಿಪತ್ರ ಸ್ವೀಕರಿಸಿದರು.
Published on: 

* ಸತತ 5 ಬಾರಿ ಪಶ್ಚಿಮ ವಲಯದ ಮಂಗಳೂರು ತಂಡ ಚಾಂಪಿಯನ್​

ಉಡುಪಿ: ಬೆಂಗಳೂರಿನಲ್ಲಿ ಯಲಹಂಕದ ಎಪಿಟಿಎಸ್​ನಲ್ಲಿ ಅ.6ರಿಂದ 8ರ ವರಗೆ ನಡೆದ 8ನೇ ವರ್ಷದ ರಾಜ್ಯಮಟ್ಟದ ಪೊಲೀಸ್​ ಕರ್ತವ್ಯ ಕೂಟದ ವಿವಿಧ ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲೆಯ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ಅನೇಕ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಸಿಪಿಸಿ ವಿನಾಯಕ ಮೇಸ್ತ ಎಫ್​ಎಸ್​ಎಲ್​ ವಿಭಾಗದ ಪೊಲೀಸ್​ ಪೋಟ್ರೇಟ್​ ಸ್ಪರ್ಧೆಯಲ್ಲಿ ಪ್ರಥಮ, ಅಬ್ಸರ್ವೇಶನ್​ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಪೊಲೀಸ್​ ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ಆರ್​ಎಸ್​ಐ ಗಿರೀಶ್​ ಪ್ರಥಮ, ಶಿವಾನಂದ ಸಿಎಚ್​ಸಿ ತೃತೀಯ, ಶ್ವಾನದಳದ ಸ್ಫೋಟಕ ಪತ್ತೆ ಸ್ಪರ್ಧೆಯಲ್ಲಿ ಶ್ವಾನ ತೇಜಸ್​ (ಹ್ಯಾಂಡ್ಲರ್​ ಎಪಿಸಿ ರಾಘವೇಂದ್ರ ಆಚಾರಿ, ಎಪಿಸಿ ಗಣೇಶ್​ ಎಂ.) ತೃತೀಯ, ಶ್ವಾನದಳದ ಅಪರಾಧ ಪತ್ತೆ ಸ್ಪರ್ಧೆಯಲ್ಲಿ ಶ್ವಾನ ಸ್ನೈಪರ್​ (ಹ್ಯಾಂಡ್ಲರ್​ ಎಪಿಸಿ ಹರೀಶ್​ ಶೆಟ್ಟಿ, ಎಪಿಸಿ ಯೋಗೀಶ್​ ನಾಯ್ಕ್​) ತೃತೀಯ ಸ್ಥಾನ ಗಳಿಸಿದ್ದಾರೆ.

ಸತತ 5ನೇ ಬಾರಿ ಪಶ್ಚಿಮ ವಲಯದ ಮಂಗಳೂರು ತಂಡವು ರಾಜ್ಯಮಟ್ಟದಲ್ಲಿ ಚಾಂಪಿಯನ್​ ತಂಡವಾಗಿ ಸಾಧನೆ ಮಾಡಿದೆ. ವಿಜೇತರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net