ವೈಜ್ಞಾನಿಕ ಪದ್ಧತಿಯಲ್ಲಿ ನಡೆಸಿ ಸೂಕ್ತ ತನಿಖೆ

ಉಡುಪಿಯಲ್ಲಿ ನಡೆದ ಪಶ್ಚಿಮ ವಲಯ ಪೊಲೀಸ್​ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆಗೆ ಐಜಿಪಿ ಚೇತನ್​ ಆರ್​. ನೀಡಿದ 'ಸರ್ವಾಂಗೀಣ' ಪ್ರಶಸ್ತಿಯನ್ನು ಎಸ್​ಪಿ ಹರಿರಾಂ ಶಂಕರ್​ ಸ್ವೀಕರಿಸಿದರು. ವಿವಿಧ ಅಧಿಕಾರಿಗಳು ಇದ್ದರು.
ಉಡುಪಿಯಲ್ಲಿ ನಡೆದ ಪಶ್ಚಿಮ ವಲಯ ಪೊಲೀಸ್​ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆಗೆ ಐಜಿಪಿ ಚೇತನ್​ ಆರ್​. ನೀಡಿದ 'ಸರ್ವಾಂಗೀಣ' ಪ್ರಶಸ್ತಿಯನ್ನು ಎಸ್​ಪಿ ಹರಿರಾಂ ಶಂಕರ್​ ಸ್ವೀಕರಿಸಿದರು. ವಿವಿಧ ಅಧಿಕಾರಿಗಳು ಇದ್ದರು.
Published on

* ಪೊಲೀಸರಿಗೆ ಐಜಿಪಿ ಚೇತನ್​ ಆರ್​. ಕಿವಿಮಾತು

* ಪಶ್ಚಿಮ ವಲಯ ಪೊಲೀಸ್​ ಕರ್ತವ್ಯ ಕೂಟದ ಸಮಾರೋಪ 

ಉಡುಪಿ: ಪೊಲೀಸ್​ ಇಲಾಖೆಯ ಕಾರ್ಯ ಇತರ ಇಲಾಖೆಯಂತೆ ಸುಲಭದ ಕೆಲಸವಲ್ಲ. ತಮ್ಮ ದೈನಂದಿನ ಕರ್ತವ್ಯದಲ್ಲಿ ಮೈಮರೆಯಬಾರದು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ತನಿಖೆ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು ಎಂದು ಪಶ್ಚಿಮ ವಲಯ ಐಜಿಪಿ ಚೇತನ್​ ಆರ್​. ಕಿವಿಮಾತು ಹೇಳಿದರು.
ಮಣಿಪಾಲ ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ (ಸೆ.1) ಸಾಯಂಕಾಲ ಆಯೋಜಿಸಿದ್ದ ಪಶ್ಚಿಮ ವಲಯದ 8ನೇ ಪೊಲೀಸ್​ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್​ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಮಂಗಳೂರಿನ ಉಪನಿರ್ದೇಶಕಿ ಸುಜಾತಾ ಕೆ.ಎಂ., ಮಾಹೆಯ ಡಾ. ಅನಿಲ್​ ಭಟ್​, ಡಾ. ವಿನೋದ್​ ಸಿ. ನಾಯಕ್​ ಹಾಗೂ ಜಿಲ್ಲೆಯ ಪೊಲೀಸ್​ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್​ ನಿರೀಕ್ಷಕ ಸೋಮಶಂಕರ್​ ಎನ್​. ಸ್ವಾಗತಿಸಿದರು. ಪೊಲೀಸ್​ ಸಿಬ್ಬಂದಿ ಶಿವಾನಂದ್​ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ವಂದಿಸಿದರು. 

ನಾಲ್ಕು ಜಿಲ್ಲೆಗಳ  20 ವಿಭಾಗಗಳಲ್ಲಿ ಸ್ಪರ್ಧೆ

ಪೊಲೀಸ್​ ಕರ್ತವ್ಯ ಕೂಟದಲ್ಲಿ ಸೈಂಟಿಫಿಕ್​ ಏಡ್ಸ್​ ಟು ಇನ್​ವೆಸ್ಟಿಗೇಷನ್​ನ 8 ವಿಭಾಗ, ಗಣಕಯಂತ್ರ ನೈಪುಣ್ಯತೆಯ 3 ವಿಭಾಗ, ಪೋಟೋಗೃಫಿ, ವೀಡಿಯೋಗೃಫಿ, ವಿದ್ವಂಸಕ ಕೃತ್ಯ ತಪಾಸಣೆಯ 4 ವಿಭಾಗ, ಪೊಲೀಸ್​ ಶ್ವಾನದಳದ 3 ವಿಭಾಗ ಸೇರಿ ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನುರಿತ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಪೊಲೀಸ್​ಗೆ 'ಸರ್ವಾಂಗೀಣ' ಪ್ರಶಸ್ತಿ

ಉಡುಪಿ ಜಿಲ್ಲೆಯು ಅತಿ ಹೆಚ್ಚು ಪದಕ ಗಳಿಸಿ 'ಸರ್ವಾಂಗೀಣ' ಪ್ರಶಸ್ತಿಗೆ ಭಾಜನವಾಯಿತು. ಅಲ್ಲದೆ, ಉಡುಪಿಯ ಪೊಲೀಸ್​ ಶ್ವಾನ ಸ್ನೈಪರ್​ ಅತ್ಯುತ್ತಮ ಶ್ವಾನ ಪ್ರಶಸ್ತಿ ಗಳಿಸಿದ್ದು, ಅದರ ಹ್ಯಾಂಡ್ಲರ್​ ಹರೀಶ್​ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕಗಳಿಸಿದ್ದ ಉಡುಪಿ ಡಿಎಆರ್​ನ ಸಿಬ್ಬಂದಿ ಲೋಕೇಶ್​ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗಾಗಿ ಪಶ್ಚಿಮ ವಲಯದ ಪೊಲೀಸ್​ ಕರ್ತವ್ಯ ಕೂಟದ ನೋಡಲ್​ ಅಧಿಕಾರಿ ಗೌರೀಶ್​ ಎ.ಸಿ. ಅವರನ್ನು ಜಿಲ್ಲಾ ಪೊಲೀಸ್​ ವತಿಯಿಂದ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net