ಬಾಗಿಲು ಇಲ್ಲದ 23 ಬಸ್​ಗಳ ವಿರುದ್ಧ ಪ್ರಕರಣ

ಬಾಗಿಲು ಅಳವಡಿಸದ ಖಾಸಗಿ ಬಸ್​ಗಳ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್​ ಹಾಗೂ ಆರ್​ಟಿಒ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿರುವುದು.
ಬಾಗಿಲು ಅಳವಡಿಸದ ಖಾಸಗಿ ಬಸ್​ಗಳ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್​ ಹಾಗೂ ಆರ್​ಟಿಒ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿರುವುದು.
Published on

* ಉಡುಪಿ ಜಿಲ್ಲಾ ಪೊಲೀಸ್​, ಆರ್​ಟಿಒ ಜಂಟಿ ಕಾರ್ಯಾಚರಣೆ

ಉಡುಪಿ: ಜಿಲ್ಲೆಯಲ್ಲಿ ಖಾಸಗಿ ಬಸ್​ಗಳ ಸಂಚಾರ ವ್ಯವಸ್ಥೆಯಲ್ಲಿ ನಿಗಾ ವಹಿಸಿರುವ ಜಿಲ್ಲಾ ಪೊಲೀಸ್​ ಇಲಾಖೆ, ಬಾಗಿಲು ಅಳವಡಿಸದ ಬಸ್​ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಈವರೆಗೆ 23 ಬಸ್​ಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಉಡುಪಿ ಸಂಚಾರ ಪೊಲೀಸ್​ ಠಾಣೆಯಲ್ಲಿ 15 ಪ್ರಕರಣ ಹಾಗೂ ಕುಂದಾಪುರ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ  ಕಾರ್ಯಾಚರಣೆಯನ್ನು ಉಡುಪಿ ಆರ್​ಟಿಒ ಅವರೊಂದಿಗೆ ಜಂಟಿಯಾಗಿ ನಡೆಸಲಾಗಿದ್ದು, ಒಟ್ಟು 11,500 ರೂ. ದಂಡ ವಸೂಲಿ ಮಾಡಲಾಗಿದೆ. ಸದರಿ ಕಾರ್ಯಚರಣೆ ಮುಂದುವರಿಯಲಿದೆ ಎಂದು ಎಸ್ಪಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.
ಯಾವುದೇ ಬಸ್​ನ ಮಾಲೀಕರು ಬಾಗಿಲು ಅಳವಡಿಸಿಕೊಳ್ಳದಿದ್ದಲ್ಲಿ ಅಂತಹ ಬಸ್​ಗಳ ಎಫ್​ಸಿಆರ್​ ನವೀಕರಣ ಮಾಡದಂತೆ ಜಿಲ್ಲಾಧಿಕಾರಿಯೂ ಸಹ ಇತ್ತೀಚೆಗೆ ನಡೆಸಿದ ರಸ್ತೆ ಸುರಕ್ಷತಾ ಮಾರ್ಗಸೂಚಿ ಸಭೆಯಲ್ಲಿ ಸೂಚನೆ ನೀಡಿದ್ದರು. ಹೀಗಾಗಿ ಜಂಟಿ ಕಾರ್ಯಾಚರಣೆ ನಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net