ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಿವೃತ್ತ ಸೈನಿಕ ಕೆ.ಶಿವರಾಮ್ ಮಂಜ ದಂಪತಿಯನ್ನು ಸನ್ಮಾನಿಸಲಾಯಿತು. ಯಶ್ಪಾಲ್ ಸುವರ್ಣ, ಕಮಲಾಕ್ಷ ಹೆಬ್ಬಾರ್, ಶ್ರೀಕಾಂತ್ ನಾಯಕ್, ದಿನೇಶ್ ಅಮೀನ್, ರಾಜೀವ್ ಕುಲಾಲ್, ಡಾ. ವಿಶ್ವನಾಥ್ ಶಾನಭೋಗ, ಡಾ.ವೆಂಕಟೇಶ ಶಾನಭೋಗ, ಡಾ.ಇಂದಿರಾ ಶಾನಭೋಗ ಇತರರಿದ್ದರು.
Published on:
Copied
Follow Us
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಮತ
* ನಿವೃತ್ತ ಸೈನಿಕ ಕೆ.ಶಿವರಾಮ್ ಮಂಜ ದಂಪತಿಗೆ ಸನ್ಮಾನ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 'ಹರ್ ಘರ್ ತಿರಂಗಾ' ಕಾರ್ಯಕ್ರಮ ಆಯೋಜಿಸಿ ನಿವೃತ್ತ ಯೋಧರನ್ನು ಗೌರವಿಸಲಾಗುತ್ತಿದೆ. ದೇಶದ ಗಡಿಗಳಲ್ಲಿ ಸೈನಿಕರು ಹಗಲಿರುಳು ರಕ್ಷಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ನಾವೆಲ್ಲರೂ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇದು ನನ್ನ ರಾಷ್ಟ್ರ ಎಂಬ ಅಭಿಮಾನ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಣಿಪಾಲದ ಮಂಚಿಯಲ್ಲಿ ಬುಧವಾರ (ಆ,12) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಸ್ಕ್ವಾಡ್ರನ್ ಲೀಡರ್ ಕೆ.ಶಿವರಾಮ್ ಮಂಜ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ರಾಷ್ಟ್ರದ ಅರಿವು
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಮಾತನಾಡಿ, 'ಹರ್ ರ್ ತಿರಂಗಾ' ಎಂಬ ಪ್ರಧಾನಿ ಮೋದಿ ಆಯೋಜಿಸಿರುವ ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ದೇಶಪ್ರೇಮದ ಕುರಿತಾಗಿ ಅರಿವು ಮೂಡುತ್ತದೆ. ಅಲ್ಲದೆ, ದೇಶವು ಸ್ವಾತಂತ್ರ್ಯ ಹೊಂದುವಂತಾಗಲು ಹಲವು ವರ್ಷಗಳ ಕಾಲ ಶ್ರಮಿಸಿದ, ಜೀವ ತ್ಯಾಗ ಮಾಡಿದ ಮಹನೀಯರ ಮಹತ್ವವೂ ತಿಳಿಯುತ್ತದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ನಗರ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಡಾ. ವಿಶ್ವನಾಥ್ ಶಾನಭೋಗ, ಡಾ.ವೆಂಕಟೇಶ ಶಾನಭೋಗ, ಡಾ.ಇಂದಿರಾ ಶಾನಭೋಗ, ಡಾ.ತಾರಾ ಶಾನಭೋಗ, ಮನೋಜ್ ಶೆಟ್ಟಿ, ರತ್ನಾಕರ್ ಇಂದ್ರಾಳಿ ಉಪಸ್ಥಿತರಿದ್ದರು.
ಅಶೋಕ್ ನಾಯ್ಕ್, ಲೋಕಯ್ಯ, ನಾರಾಯಣ ಮಂಜ, ಪ್ರಕಾಶ್ ಮಧ್ಯಸ್ಥ, ರಾಜೇಶ್ವರಿ ಮಂಜ, ಲೀಲಾವತಿ ಭಟ್, ಪ್ರಸಾದ್ ಭಟ್, ಸಂದೀಪ್ ಮಂಜ, ಸಹನಾ ಹಾಗೂ ಪಕ್ಷ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಭಾರತೀಯ ಸೇನೆಗೆ ಮೋದಿ ಬಲ
ಗೌರವ ಸ್ವೀಕರಿಸಿದ ನಿವೃತ್ತ ಸೈನಿಕ ಕೆ.ಶಿವರಾಮ್ ಮಂಜ ಮಾತನಾಡಿ, ಭಾರತೀಯ ಸೇನೆ ಹಿಂದಿನಿಂದಲೂ ಪ್ರಬಲವಾಗಿದೆ. ಅದಕ್ಕೆ ಈ ಹಿಂದೆ ನಡೆದ ಯುದ್ಧಗಳ ಗೆಲುವೇ ನಿದರ್ಶನವಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತೀಯ ಸೇನೆ ಇನ್ನಷ್ಟು ಬಲಿಷ್ಠವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ನಾವೀನ್ಯತೆಯ ಯುದ್ಧ ವಿಮಾನ, ಅತ್ಯುತ್ತಮ ಶಸ್ತ್ರಾಸ್ತ್ರ ಸೌಲಭ್ಯ ಒದಗಿಸಿದ್ದಾರೆ. ಯೋಧರಿಗೂ ಸಹ ಹಲವಾರು ಕೊಡುಗೆ ನೀಡಿದ್ದಾರೆ ಎಂದರು.