ಅ. 21ಕ್ಕೆ ಉಚ್ಚಿಲ ದಸರಾ ಶೋಭಾಯಾತ್ರೆ; ವಾಹನ ಸಂಚಾರ ಮಾರ್ಗ ಬದಲಾವಣೆ

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಬೃಹತ್​ ಶೋಭಾಯಾತ್ರೆ ಮೆರವಣಿಗೆ ಅ. 21ರಂದು ರಾ.ಹೆ.ಯಲ್ಲಿ ಸಾಗಲಿರುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪಾ ಟಿ.ಕೆ. ಅಧಿಸೂಚನೆ ಹೊರಡಿಸಿದ್ದಾರೆ.
uchila dasara
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.
Published on: 

ಉಡುಪಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಬೃಹತ್​ ಶೋಭಾಯಾತ್ರೆ ಮೆರವಣಿಗೆ ಅ. 21ರಂದು ರಾ.ಹೆ.ಯಲ್ಲಿ ಸಾಗಲಿರುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪಾ ಟಿ.ಕೆ. ಅಧಿಸೂಚನೆ ಹೊರಡಿಸಿದ್ದಾರೆ.

ಅ. 21ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳು ಕಟಪಾಡಿ-, ಶಿರ್ವ, -ಬೆಳಪು, -ಪಡಬಿದ್ರಿ ಮಾರ್ಗವಾಗಿ ಸಂಚರಿಸಬೇಕು. ಉಡುಪಿ ಕಡೆಯಿಂದ ಬಜ್ಪೆ ಏರ್​ಪೋರ್ಟ್​ಗೆ ಹೋಗುವ ವಾಹನಗಳು ಕಟಿಪಾಡಿ, -ಶಿರ್ವ, -ಬೆಳಪು, -ಮುಂಡ್ಕೂರು ಮಾರ್ಗವಾಗಿ ಸಾಗಬೇಕು.

ಘನ ವಾಹನಗಳ ನಿಲುಗಡೆ

ಟ್ರಕ್​, ಲಾರಿ, ಟ್ಯಾಂಕರ್​ ಮುಂತಾದ ಘನ ವಾಹನಗಳು ರಾತ್ರಿ 9 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿ ಟ್ರಕ್​ ಬೇಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರಿಸಬೇಕು. ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್​ಗಳು ರಾತ್ರಿ 9 ಗಂಟೆಯ ನಂತರ ಉಡುಪಿಯಿಂದ ಸಂಚರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net