

* ಉಡುಪಿಯ ಆದರ್ಶ ಆಸ್ಪತ್ರೆ ವೈದ್ಯರ ಸಾಧನೆ
ಅತ್ಯಂತ ಕಠಿಣ ವೈದ್ಯಕೀಯ ಪ್ರಕ್ರಿಯೆ
ಈ ಸಾಧನೆಯು ಉಡುಪಿಯ ವೈದ್ಯಕೀಯ ಇತಿಹಾಸದಲ್ಲಿ ಹಾಗೂ ಕರಾವಳಿ ಭಾಗದ ಸುಧಾರಿತ ಸರ್ಜಿಕಲ್ ಅಂಕಾಲಜಿ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು. ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಗಡ್ಡೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಯುವಕರಿಬ್ಬರನ್ನು ಅಂಗವೈಕಲ್ಯದ ಭೀತಿಯಿಂದ ಪಾರುಮಾಡಲಾಗಿದೆ. ಕ್ಯಾನ್ಸರ್ ಎಂದರೆ ಬದುಕಿನ ಅಂತ್ಯವಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ ರೋಗಿಯ ಜೀವ ಮತ್ತು ಜೀವನ ಎರಡನ್ನೂ ಉಳಿಸಬಹುದು.
— ಡಾ. ಜಿ.ಎಸ್. ಚಂದ್ರಶೇಖರ್. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ.