ಕಾಪು ಬೀಚ್‌ನಲ್ಲಿ ಪ್ರವಾಸಿಗರು ನೀರುಪಾಲು

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ನೀರುಪಾಲು
drown
Published on: 

ಪಡುಬಿದ್ರಿ: ಕಾಪು ಬೀಚ್‌ಗೆ ಆಗಮಿಸಿದ್ದ ದಾವಣಗೆರೆ ಮೂಲದ ಪ್ರವಾಸಿಗರಿಬ್ಬರು ಭಾನುವಾರ ನೀರು ಪಾಲಾಗಿದ್ದಾರೆೆ. ದಾವಣಗೆರೆಯಿಂದ ಆಗಮಿಸಿದ್ದ 5 ಮಂದಿಯಿದ್ದ ಪ್ರವಾಸಿಗರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿದ್ದರು. ಈ ವೇಳೆ ಬೀಚ್‌ನ ಜೀವ ರಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೂವರನ್ನು ರಕ್ಷಿಸಿದ್ದಾರೆ.

ಸಮೀರ್(21) ಹಾಗೂ ಮಹಮ್ಮದ್ ರಿಯಾನ್(14) ನೀರು ಪಾಲಾಗಿದ್ದು, ಅವರಿಗಾಗಿ ಸ್ಥಳೀಯ ಮುಳುಗು ತಜ್ಞರು ಹಾಗೂ ಈಶ್ವರ ಮಲ್ಪೆ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.