ಕತ್ತಿನಲ್ಲಿದ್ದ ಚಿನ್ನದ ಸರ ದೋಚಿದ್ದ ಮೂವರು ವಶ

ಪೊನ್ನಿ, ದೇವಿ, ವಲ್ಲಿಯಮ್ಮ
ಪೊನ್ನಿ, ದೇವಿ, ವಲ್ಲಿಯಮ್ಮ
Published on: 

ಕುಂದಾಪುರ: ಸೆ.14ರಂದು ಗಣೇಶ ಚತುರ್ಥಿಯ ದಿನ ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದ ಒಳಗೆ ಜನ ಜಂಗುಳಿಯ ಮಧ್ಯೆ ಪ್ರದಕ್ಷಿಣೆ ಬರುತ್ತಿದ್ದ ಬೈಂದೂರು ತಾಲೂಕು ನಾಡ ಗುಡ್ಡೆಯಂಗಡಿ ನಿವಾಸಿ ಮುತ್ತು ಎಂಬುವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದೋಚಿಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಜೈಲಿನಿಂದ ವಶಕ್ಕೆ ಪಡೆದು ಕುಂದಾಪುರಕ್ಕೆ ತರೆತಂದು ಸುಲಿಗೆ ಮಾಡಿದ ಸುಮಾರು 2 ಲಕ್ಷ ರೂ. ಮೌಲ್ಯದ 15.340 ಗ್ರಾಂ ತೂಕದ ಚಿನ್ನದ ಸರವನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ವಲ್ಲಿಯಮ್ಮ, ದೇವಿ ತಿಲೋತ್ತಮ ಮತ್ತು ಪೊನ್ನಿ ಬಂಧಿತ ಆರೋಪಿಗಳು. ಚಿನ್ನದ ಸರವನ್ನು ದೋಚಿದ್ದ ಮೂವರು ಆರೋಪಿಗಳನ್ನು ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಠಾಣೆಯ ಪೊಲೀಸರು ಬಂಧಿಸಿರುವುದು ತನಿಖೆ ವೇಳೆ ತಿಳಿದು ಬಂದಿತ್ತು. ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನಿರ್ದೇಶನದಂತೆ ತನಿಖೆ ಕೈಗೊಂಡ ಕುಂದಾಪುರ ಠಾಣೆಯ ಪೊಲೀಸ್ ನಿರೀಕ್ಷಕರು ನ್ಯಾಯಾಲಯದ ಆದೇಶ ಪಡೆದು ಆರೋಪಿಗಳನ್ನು ಮಾನಂತವಾಡಿ ಜೈಲಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.