ಉಚ್ಚಿಲ ದೇವಳಕ್ಕೆ ಸಹಸ್ರಾರು ಭಕ್ತರ ಸಂದರ್ಶನ

ಪ್ರೇಕ್ಷಕರ ಗಮನ ಸೆಳೆದ ಕಿನ್ನಿ ಪಿಲಿ, ಪೊಣ್ಣು ಪಿಲಿ ನಲಿಕೆ, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ
 ಉಡುಪಿ ಉಚ್ಚಿಲ ದಸರಾಗೆ ಅಂಗವಾಗಿ ನಡೆದ ಚಂಡಿಕಾಯಾಗದಲ್ಲಿ ಉದ್ಯಮಿ ಆನಂದ ಸಿ.ಕುಂದರ್ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರಮುಖರಾದ ನಾಡೋಜ ಜಿ.ಶಂಕರ್, ಜಯ ಸಿ.ಕೋಟ್ಯಾನ್, ಗಿರಿಧರ ಸುವರ್ಣ, ಸತೀಶ್ ಅಮೀನ್ ಬಾರ್ಕೂರು ಮತ್ತಿತರರಿದ್ದರು.
ಉಡುಪಿ ಉಚ್ಚಿಲ ದಸರಾಗೆ ಅಂಗವಾಗಿ ನಡೆದ ಚಂಡಿಕಾಯಾಗದಲ್ಲಿ ಉದ್ಯಮಿ ಆನಂದ ಸಿ.ಕುಂದರ್ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರಮುಖರಾದ ನಾಡೋಜ ಜಿ.ಶಂಕರ್, ಜಯ ಸಿ.ಕೋಟ್ಯಾನ್, ಗಿರಿಧರ ಸುವರ್ಣ, ಸತೀಶ್ ಅಮೀನ್ ಬಾರ್ಕೂರು ಮತ್ತಿತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ-2026ರ ಅಂಗವಾಗಿ ಶನಿವಾರ ಸಹಸ್ರಾರು ಭಕ್ತರು ಕ್ಷೇತ್ರ ಸಂದರ್ಶಿಸಿ ದೇವರ ದರ್ಶನ ಪಡೆದರು.

ಕ್ಷೇತ್ರದಲ್ಲಿ ಬೆಳಗ್ಗೆ ಉದಯಪೂಜೆ, ನಿತ್ಯ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ ಹಾಗೂ ಶ್ರೀ ಚಂಡಿಕಾ ಕಲ್ಪೋಕ್ತ ಪೂಜೆ ನೆರವೇರಿಸಲಾಯಿತು.

ದಸರಾ ಮುಖ್ಯ ವೇದಿಕೆಯಲ್ಲಿ ಭಜನಾ ಸಂಕೀರ್ತನೆ, ಭಕ್ತಿಗಾನ ಸುಧೆ, ಧಾರ್ಮಿಕ ಪ್ರವಚನ, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಉಡುಪಿ ಉಚ್ಚಿಲ ದಸರಾ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ ದಸರಾ ಮುಖ್ಯ ವೇದಿಕೆಯಲ್ಲಿ ಕಿನ್ನಿ ಪಿಲಿ, ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ಪ್ರೇಕ್ಷಕರ ಗಮನ ಸೆಳೆಯಿತು. ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ರಾತ್ರಿ ಮಿಸ್ಟರ್ ಉಡುಪಿ ಉಚ್ಚಿಲ ದಸರಾ-2026 ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.

ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ.ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ವೇದಪ್ರಕಾಶ್ ಶ್ರೀಯಾನ್, ಯುವರಾಜ್ ಕಿದಿಯೂರು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜಂಟಿ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ಆನಂದ ಸಿ.ಕುಂದರ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ನ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘದ ಅಧ್ಯಕ್ಷೆ ಸುಗುಣ ಕರ್ಕೇರ, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಉದಯಕುಮಾರ್ ಹಟ್ಟಿಯಂಗಡಿ, ಚೇತನ್ ಬೆಂಗ್ರೆ, ಸತೀಶ್ ಅಮೀನ್ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net