ಉಡುಪಿಯಲ್ಲಿ ಶಿರಸಿ ಅರ್ಬನ್​ ಬ್ಯಾಂಕ್​ ಶುಭಾರಂಭ

ದಿ ಶಿರಸಿ ಅರ್ಬನ್​ ಸಹಾಕರಿ ಬ್ಯಾಂಕ್​ ಲಿ.
ದಿ ಶಿರಸಿ ಅರ್ಬನ್​ ಸಹಾಕರಿ ಬ್ಯಾಂಕ್​ ಲಿ.
Published on

* 24ನೇ ಶಾಖೆಯ ಉದ್ಘಾಟನೆ ಸೆ.21ರಂದು

ಉಡುಪಿ: ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆಯ ಮೂಲಕ ನಾಡಿನ ಗಮನ ಸೆಳೆದಿರುವ ಉತ್ತರ ಕನ್ನಡ ಜಿಲ್ಲೆಯ ದಿ ಶಿರಸಿ ಅರ್ಬನ್​ ಸಹಾಕರಿ ಬ್ಯಾಂಕ್​ ಲಿ. ಶಿರಸಿ ಇದರ 24ನೇ ಶಾಖೆಯು ಉಡುಪಿಯಲ್ಲಿ ಸೆ.21ರಂದು ಶುಭಾರಂಭಗೊಳ್ಳಲಿದೆ. 
ಉಡುಪಿ-ಮಣಿಪಾಲ ಹೆದ್ದಾರಿಯ ಕುಂಜಿಬೆಟ್ಟುವಿನಲ್ಲಿ ಆಪಲ್​ ಇಮ್ಯಾಜಿನ್​ ಶೋರೂಮ್​ ಸಮೀಪದ 'ದಿ ಮಿರಾಜ್​' ಕಟ್ಟಡದ ಗ್ರೌಂಡ್​ ಫ್ಲೋರ್​ನ ಶಾಪ್​ ನಂ-9ರಲ್ಲಿ ಆರಂಭಗೊಳ್ಳಲಿದೆ. 
ಸಂಜೆ 4:30ಕ್ಕೆ ಸಮಾರಂಭ ನಡೆಯಲಿದ್ದು, ಎಸ್​ವಿಸಿ ಕೋ-ಆಪರೇಟೀವ್​ ಬ್ಯಾಂಕ್​ ಮುಂಬೈನ ನಿರ್ದೇಶಕ ಸತೀಶ್​ ಟೋನ್ಸೆ ರಾವ್​ ಉದ್ಘಾಟಿಸಲಿದ್ದಾರೆ. ದಿ ಶಿರಸಿ ಅರ್ಬನ್​ ಸಹಾಕರಿ ಬ್ಯಾಂಕ್​ ಲಿ. ಶಿರಸಿಯ ಅಧ್ಯಕ್ಷ ಜಯದೇವ್​ ಯು. ನೀಲೇಕಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕರಾವಳಿ ಭದ್ರತಾ ಪೊಲೀಸ್​ ಪಡೆ ಉಡುಪಿ ಮಲ್ಪೆಯ ಡಿವೈಎಸ್ಪಿ ಗಣೇಶ್​ ಕೆ.ಎಲ್​., ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಷನ್​ನ ಕೋಶಾಧಿಕಾರಿ ಟಿ.ಸಚಿನ್​ ಪೈ ಹಾಗೂ ಇನ್ನಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net