ಉಡುಪಿ ಪ್ರಸಾದ್​ ನೇತ್ರಾಲಯದ ಸೇವೆ ಅರ್ಥಪೂರ್ಣ

ಗೋವಾದಲ್ಲಿ ಉಡುಪಿಯ ಪ್ರಸಾದ್​ ನೇತ್ರಾಲಯದಿಂದ ಆಯೋಜಿಸಿದ್ದ ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಡಾ. ಪ್ರಮೋದ್​ ಸಾವಂತ್​ ಮಾತನಾಡಿದರು. ಶ್ರೀಪಾದ್​ ನಾಯ್ಕ್​, ಡಾ.ಕೃಷ್ಣ ಪ್ರಸಾದ್​, ಸದಾನಂದ್​ ಶೇಟ್​ ತಾನವಾಡೆ, ದಾಮು ನಾಯಕ್​, ದಿಗಂಬರ್​ ಕಾಮತ್​, ಡಾ. ಗೋವಿಂದ ಕಾಳೆ, ಸಿದ್ಧೇಶ್​ ನಾಯಕ್​ ಇತರರಿದ್ದರು.
ಗೋವಾದಲ್ಲಿ ಉಡುಪಿಯ ಪ್ರಸಾದ್​ ನೇತ್ರಾಲಯದಿಂದ ಆಯೋಜಿಸಿದ್ದ ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಡಾ. ಪ್ರಮೋದ್​ ಸಾವಂತ್​ ಮಾತನಾಡಿದರು. ಶ್ರೀಪಾದ್​ ನಾಯ್ಕ್​, ಡಾ.ಕೃಷ್ಣ ಪ್ರಸಾದ್​, ಸದಾನಂದ್​ ಶೇಟ್​ ತಾನವಾಡೆ, ದಾಮು ನಾಯಕ್​, ದಿಗಂಬರ್​ ಕಾಮತ್​, ಡಾ. ಗೋವಿಂದ ಕಾಳೆ, ಸಿದ್ಧೇಶ್​ ನಾಯಕ್​ ಇತರರಿದ್ದರು.
Published on: 

* ಗೋವಾ ಸಿಎಂ ಡಾ. ಪ್ರಮೋದ್​ ಸಾವಂತ್​ ಶ್ಲಾಘನೆ

* ಸಚಿವ ಶ್ರೀಪಾದ ನಾಯ್ಕ್​ ಜನ್ಮದಿನ, ನೇತ್ರ ತಪಾಸಣಾ ಶಿಬಿರ

ಉಡುಪಿ: ಕೇಂದ್ರ ಸಚಿವ ಶ್ರೀಪಾದ್​ ನಾಯ್ಕ್​ ಅವರು ಗೋವಾ ರಾಜ್ಯದ ಜನಪ್ರಿಯ ನಾಯಕರು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಲು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಬಂದಿರುವುದು ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಗಳಿಸಿರುವ ವಿಶ್ವಾಸ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಪ್ರಸಾದ್​ ನೇತ್ರಾಲಯದವರ ನೇತ್ರಸೇವೆ ಅರ್ಥಪೂರ್ಣವಾಗಿದ್ದು ಇಲ್ಲಿನ ಜನ ಕೃತಜ್ಞರಾಗಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್​ ಸಾವಂತ್​ ಅಭಿಪ್ರಾಯಪಟ್ಟರು.

ಗೋವಾದಲ್ಲಿ ಕೇಂದ್ರ ಬಿಜೆಪಿ ಸಚಿವ ಶ್ರೀಪಾದ್​ ಯೆಸ್ಸೋ ನಾಯ್ಕ್​ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ಉಡುಪಿಯ ಪ್ರಸಾದ್​ ನೇತ್ರಾಲಯ ಸೂಪರ್​ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 9ನೇ ವರ್ಷದ ನೇತ್ರ ಉಚಿತ ತಪಾಸಣೆ, ಕನ್ನಡಕ ವಿತರಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ಸೇವೆ ಮಾದರಿ

ಪ್ರಸಾದ್​ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ದೃಷ್ಟಿ ನೀತಿ ಸಮಿತಿಯ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್​ ಕೂಡ್ಲು ಮಾತನಾಡಿ, ಶ್ರೀಪಾದ್​ ನಾಯ್ಕ್​ ಅವರು ಪಕ್ಷ ರಾಜಕೀಯ ಗಡಿ ಮೀರಿ ವಿವಿಧ ಕ್ಷೇತ್ರಗಳ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ಸಾರ್ವಜನಿಕ ಸೇವೆ ಮಾದರಿಯಾಗಿದೆ. 9 ವರ್ಷದಿಂದ ಗೋವಾದಲ್ಲಿ ನಮ್ಮ ನೇತ್ರಾಲಯದಿಂದ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ ಎಂದರು.

ರಾಜ್ಯಸಭಾ ಸದಸ್ಯ ಸದಾನಂದ್​ ಶೇಟ್​ ತಾನವಾಡೆ, ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್​, ಸಚಿವ ದಿಗಂಬರ್​ ಕಾಮತ್​, ಡಾ. ಗೋವಿಂದ ಕಾಳೆ, ಜಿಪಂ ಸದಸ್ಯ ಸಿದ್ಧೇಶ್​ ನಾಯಕ್​ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 492 ಮಂದಿಯ ನೇತ್ರ ತಪಾಸಣೆ ಮಾಡಲಾಯಿತು, 52 ಜನರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು, 368 ಜನರಿಗೆ ಉಚಿತ ಕನ್ನಡಕ ವಿತರಣೆಗೆ ಆಯ್ಕೆಮಾಡಲಾಯಿತು. ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

ರಾಜಕೀಯ ಜೀವನದಲ್ಲಿ ಅಟಲ್​ಜಿ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಜನರಿಂದ ಅಪಾರ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದ ದೊರೆತಿದೆ. ಡಾ. ಕೃಷ್ಣ ಪ್ರಸಾದ್​ ಅವರ ಅಭಿಮಾನವನ್ನು ಗೋವಾ ಜನತೆಗೆ ನೀಡುತ್ತಿರುವ ನೇತ್ರ ಸೇವೆಯಲ್ಲಿ ಕಂಡುಕೊಂಡಿದ್ದು ಅವರಿಗೆ ಕೃತಜ್ಞನಾಗಿದ್ದೇನೆ.
ಶ್ರೀಪಾದ್​ ಯೆಸ್ಸೋ ನಾಯ್ಕ್​. ಕೇಂದ್ರ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net