ಓಣಂ ಹಬ್ಬದ ಪ್ರಯುಕ್ತ ಉನ್ನತಿಯ ಸದಸ್ಯರಿಗೆ ಓಣಂ ಹಬ್ಬದ ಉಡುಗೊರೆ ನೀಡಲಾಯಿತು. ಅಶ್ವಿನಿ ಕೆ.ಎಂ., ಅವಿನಾಶ್ ರೈ, ಶ್ಯಾಮಪ್ರಸಾದ ಸರಳಿ, ಉದನೇಶ್ವರ, ಶರತ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
Published on:
Copied
Follow Us
ಬದಿಯಡ್ಕ: ಬಡ ಜನರೊಂದಿಗೆ ಸದಾ ಬೆರೆಯಬೇಕೆನ್ನುವ ನರೇಂದ್ರ ಮೋದಿಯವರ ಆಶಯ ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ. ಬಡವರ, ಶೋಷಿತರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ಅರಳಿಸುವುದೇ ಬಿಜೆಪಿಯ ಮುಖ್ಯ ಧ್ಯೇಯ ಎಂದು ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರಮಣಿ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೆರಡಾಲ ಕೊರಗ ಉನ್ನತಿಯಲ್ಲಿ ಶನಿವಾರ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಪಂ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಪಂ ಸದಸ್ಯ ಶ್ಯಾಮಪ್ರಸಾದ ಸರಳಿ, ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ, ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅನಿತಾ ನಾಯಕ್, ಕಾರ್ಯಕರ್ತ ಸಾಯಿ ಪ್ರಣವ್ ಪಾಲ್ಗೊಂಡಿದ್ದರು.
ಬಿಜೆಪಿ ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಪ್ರೇಮಲತಾ ವಂದಿಸಿದರು. ಓಣಂ ಹಬ್ಬದ ಪ್ರಯುಕ್ತ ಉನ್ನತಿಯ ಎಲ್ಲ ಕುಟುಂಬಗಳಿಗೆ ಸಿಹಿ ತಿಂಡಿ ಹಾಗೂ ಹಿರಿಯರಿಗೆ ಅಶಕ್ತರಿಗೆ ಹೊಸ ವಸ್ತ್ರ ವಿತರಿಸಲಾಯಿತು.