ರಾಮ ದೇವರ ಆದರ್ಶಗಳು ಸರ್ವೋತ್ತಮ

 ಕೇರಳದ ಶ್ರೀರಾಮ ನವಮಿ ರಥಯಾತ್ರೆಗೆ ಮೂಡುಬಿದಿರೆಯಲ್ಲಿ ಭಕ್ತಿಪೂರ್ವವಾಗಿ ಸ್ವಾಗತಿಸಲಾಯಿತು. ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಂಜನೇಯ ಆಶ್ರಮದ ಸ್ವಾಮಿ ಹನುಮದ್ ಸದಾನಂದ ಸರಸ್ವತಿ ಸ್ವಾಮೀಜಿ ಮೊದಲಾದವರಿದ್ದರು.
ಕೇರಳದ ಶ್ರೀರಾಮ ನವಮಿ ರಥಯಾತ್ರೆಗೆ ಮೂಡುಬಿದಿರೆಯಲ್ಲಿ ಭಕ್ತಿಪೂರ್ವವಾಗಿ ಸ್ವಾಗತಿಸಲಾಯಿತು. ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಂಜನೇಯ ಆಶ್ರಮದ ಸ್ವಾಮಿ ಹನುಮದ್ ಸದಾನಂದ ಸರಸ್ವತಿ ಸ್ವಾಮೀಜಿ ಮೊದಲಾದವರಿದ್ದರು.
Published on
ಮೂಡುಬಿದಿರೆ: ಕೇರಳದ ಮಲ್ಲಪುರಂ ಜಿಲ್ಲೆಯ ಆಂಜನೇಯ ಆಶ್ರಮದ ವಾರ್ಷಿಕ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಶ್ರೀರಾಮ ನವಮಿ ರಥಯಾತ್ರೆ ಮೂಡುಬಿದಿರೆಗೆ ಆಗಮಿಸಿದ್ದು, ಅಲಂಗಾರಿನಲ್ಲಿ ಮಂಗಳವಾರ ಸಂಜೆ ಸ್ವಾಗತ ದೊರೆಯಿತು.
ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನ, ಶ್ರೀರಾಮ ನವಮಿ ರಥಯಾತ್ರೆ ಸಮಿತಿ ಸಂಚಾಲಕ ಎಂ.ದಯಾನಂದ ಪೈ ನೇತೃತ್ವದಲ್ಲಿ ರಥದಲ್ಲಿದ್ದ ಶ್ರೀರಾಮ ದೇವರ ಮೂರ್ತಿಗೆ ಸ್ವಾಮೀಜಿ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಅಲಂಗಾರಿನಿಂದ ಮೂಡುಬಿದಿರೆ ಜೈನ ಮಠದವರೆಗೆ ಶೋಭಾಯಾತ್ರೆ ನಡೆಯಿತು.
ಜೈನ ಮಠದಲ್ಲಿ ಧರ್ಮ ಸಂದೇಶ ನೀಡಿದ ಸ್ವಾಮೀಜಿ, ರಾಮ ದೇವರ ಆದರ್ಶಗಳು ಸರ್ವೋತ್ತಮವಾಗಿದ್ದು, ಇಂದಿನ ಸಮಾಜದಲ್ಲಿ ಅವುಗಳ ಮಹತ್ವ ಹೆಚ್ಚಿದೆ. ವಿಶ್ವಶಾಂತಿ ದೃಷ್ಟಿಯಿಂದ ಇಂತಹ ಧಾರ್ಮಿಕ ರಥಯಾತ್ರೆಗಳು ಹೆಚ್ಚಾಗಲಿ ಎಂದರು.
ಆಂಜನೇಯ ಆಶ್ರಮದ ಸ್ವಾಮಿ ಹನುಮದ್ ಸದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ರಥಯಾತ್ರೆಯ ವೈಶಿಷ್ಟೃ, ರೂಪುರೇಷೆ ಕುರಿತು ಮಾಹಿತಿ ನೀಡಿದರು. 6ನೇ ವರ್ಷ ಯಾತ್ರೆಯಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಉಂಟುಮಾಡಲು ಶ್ರಮಿಸುತ್ತಿದೆ ಎಂದರು.
ಪ್ರಮುಖರಾದ ಎಂ.ರಾಘುವೇಂದ್ರ ಭಂಡಾರ್ಕರ್, ಕೆ.ಶಿವ ಭಂಡಾರ್ಕರ್, ಸುಧೀರ್ ನಾಯ್ಕ, ಗಣೇಶ್ ಮಲ್ಯ, ಎಂ.ಶಾಂತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯತ್ ಕುಮಾರ್, ಎಸ್.ಪಿ.ವಿದ್ಯಾ ಕುಮಾರ್, ಗಣೇಶ್ ಪೈ ಅಲಂಗಾರು, ಸದಾಶಿವ ಶೆಟ್ಟಿ ಅಲಂಗಾರು, ಕಿಶೋರ್ ಭಂಡಾರಿ, ಭರತ್ ಶೆಟ್ಟಿ, ಮಂಜುನಾಥ ಪೈ, ಗಣೇಶ್ ನಾಯ್ಕ, ಅನೇಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net