

ಬೈಂದೂರು: ಯಾವುದೇ ವ್ಯಕ್ತಿ, ಸಂಸ್ಥೆಯಾಗಿದ್ದರೂ ಬದ್ಧತೆ ಮತ್ತು ಪ್ರಾವಾಣಿಕತೆ ಇದ್ದರೆ ದೀರ್ಘಾವಧಿಯಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಸ್ವಾಭಿವಾನ ಹಾಗೂ ಬದ್ಧತೆಯೊಂದಿಗೆ ಮುನ್ನಡೆಯುವುದು ಕಷ್ಟ ಸಾಧ್ಯವಾದರೂ ಎದುರಿಸಿ ಸಾಗುವುದರಲ್ಲಿ ಬದುಕಿನ ಯಶಸ್ಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬೈಂದೂರು ರೋಟರಿ ಕ್ಲಬ್ ಹಾಗೂ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾದ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ ವಿಶೇಷ ಯಕ್ಷಗಾನ ಪ್ರದರ್ಶನದಲ್ಲಿ ವಾತನಾಡಿದರು.
ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ರಾಜು ಪೂಜಾರಿ ವಾತನಾಡಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜೋನ್ ಒಂದರ ಸಹಾಯಕ ಪ್ರಾಂತಪಾಲ ಐ.ನಾರಾಯಣ್, ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ, ಲಾವಣ್ಯ ಬೈಂದೂರು ಕಾರ್ಯದರ್ಶಿ ಎಚ್.ಉದಯ್ ಆಚಾರ್ಯ, ಹಟ್ಟಿಯಂಗಡಿ ಮೇಳದ ಯಜವಾನ ರಂಜಿತ್ ಕುವಾರ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.
ಪತ್ರಕರ್ತ ಸುನೀಲ್ ಎಚ್.ಜಿ. ಬೈಂದೂರು ಸ್ವಾಗತಿಸಿದರು. ಶಿಕ್ಷಕ ಸುಧಾಕರ ಪಿ.ಬೈಂದೂರು ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಎಸ್.ಮಣಿಕಂಠ ದೇವಾಡಿಗ ವಂದಿಸಿದರು. ನಂತರ ವಾಯಾ ಬಜಾರ್ ಯಕ್ಷಗಾನ ಪ್ರದರ್ಶನಗೊಂಡಿತು.