ಬಡಗಬೆಟ್ಟುವಿನಲ್ಲಿ ನಿರಂತರ ನೀರು ಪೂರೈಕೆಗೆ ಚಿಂತನೆ

ಉಡುಪಿಯ ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ ಆಚರಿಸಲಾಯಿತು. ಉಪೇಂದ್ರ ನಾಯಕ್​, ಡಾ. ಸಂದೀಪಕುಮಾರ್​, ರಮೇಶ್​, ವಿರೂಪಾಕ್ಷಯ್ಯ ಕುಲಕರ್ಣಿ, ಕೇಶವ್​ ಕೋಟ್ಯಾನ್​, ರೂಪಾ ನಾಯಕ್​, ಶಕುಂತಲಾ ಶೆಟ್ಟಿ, ಶಾಂತಾ ನಾಯಕ್​ ಇದ್ದರು.
ಉಡುಪಿಯ ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ ಆಚರಿಸಲಾಯಿತು. ಉಪೇಂದ್ರ ನಾಯಕ್​, ಡಾ. ಸಂದೀಪಕುಮಾರ್​, ರಮೇಶ್​, ವಿರೂಪಾಕ್ಷಯ್ಯ ಕುಲಕರ್ಣಿ, ಕೇಶವ್​ ಕೋಟ್ಯಾನ್​, ರೂಪಾ ನಾಯಕ್​, ಶಕುಂತಲಾ ಶೆಟ್ಟಿ, ಶಾಂತಾ ನಾಯಕ್​ ಇದ್ದರು.
Published on: 

* ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​ ಮಾಹಿತಿ

* 80 ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ

ಉಡುಪಿ: ಪ್ರಸ್ತುತವಾಗಿ ಮಳೆಯ ಪ್ರಮಾಣ ತುಂಬ ಕಡಿಮೆಯಾಗಿದ್ದು ನದಿಗಳಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಹೀಗಾಗಿ ಎಲ್ಲರೂ ಮಿತವಾಗಿ ನೀರಿನ ಬಳಕೆ ಮಾಡಬೇಕಿದೆ. ಬಡಗಬೆಟ್ಟು ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ 24×7 ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​ ತಿಳಿಸಿದರು.

ಉಡುಪಿ ತಾಲೂಕಿನ ಮಹಾತ್ಮ ಗಾಂಧಿ 80 ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ ಹಾಗೂ ಗಾಂಧೀಜಿ ಜಯಂತಿ ನಿಮಿತ್ತ ಶುಕ್ರವಾರ (ಅ.2) ಆಯೋಜಿಸಿದ್ದ "ಮಹಾತ್ಮಾ ಗಾಂಧಿ ಸುಧಾರಣೋತ್ಸವ, ಜನರ ಯೋಜನಾ ಅಭಿಯಾನ' (ಸಬ್​ ಕಿ ಯೋಜನಾ&ಸಬ್​ ಕಿ ವಿಕಾಸ್​) ಎಂಬ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮಸ್ಥರಿಗೆ ಕುಡಿಯುವ ನೀರಿನ ಕಾರ್ಯಾಚರಣೆ, ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಕುಡಿಯುವ ನೀರಿನ ಎಫ್​ಟಿಕೆ ಪರೀಕ್ಷಾ ವರದಿ ಮಂಡಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಹರ್​ ಘರ್​ ಜಲ್​, ನಶಾಮುಕ್ತ ಹಾಗೂ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಯತು. ವಿಬಿಜಿ ರಾಮ್​ ಜಿ ಯೋಜನೆಯ ಮಾಹಿತಿ ನೀಡಲಾಯಿತು.

ಗ್ರಾಪಂ ಆಡಳಿತಾಧಿಕಾರಿ ಡಾ. ಸಂದೀಪಕುಮಾರ್​, ಇಂಜಿನೀಯರ್​ ರಮೇಶ್​, ಪಿಡಿಒ ವಿರೂಪಾಕ್ಷಯ್ಯ ಕುಲಕರ್ಣಿ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಕೇಶವ್​ ಕೋಟ್ಯಾನ್​, ನಿಕಟಪೂರ್ವ ಉಪಾಧ್ಯಕ್ಷೆ ರೂಪಾ ನಾಯಕ್​, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಂತಾ ನಾಯಕ್​, ಎಂಐಎಸ್​ ಕೋ&ಆರ್ಡಿನೇಟರ್​ ಕಿರಣ್​, ಆರೋಗ್ಯಾಧಿಕಾರಿ ವಸಂತಕುಮಾರ್​, ನೀರು ಪ್ರಯೋಗಾಲಯದ ರಶ್ಮಾ ವಿಕ್ರಮ್​, ಗ್ರಾಪಂ ಮಾಜಿ ಉಪಾಧ್ಯೆಯರಾದ ನಿರುಪಮಾ ಹೆಗ್ಡೆ, ಮಾಲತಿ ನಾಯ್ಕ್​, ಮಾಜಿ ಸದಸ್ಯೆ ಜ್ಯೋತಿ ಡಿ. ಪ್ರಭು ಉಪಸ್ಥಿತರಿದ್ದರು.

ಗ್ರಾಪಂ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net