ನಿರ್ದೇಶಕರು ಬ್ಯಾಂಕ್​ಗಳ ಭವಿಷ್ಯದ ಶಿಲ್ಪಿಗಳು

ಉಡುಪಿಯಲ್ಲಿ ಆಯೋಜಿಸಿದ್ದ ಕೋ-ಆಪರೇಟಿವ್​ ಬ್ಯಾಂಕ್​ಗಳ ವಿಚಾರ ಸಂಕಿರಣವನ್ನು ಎಚ್​.ಜಯಪ್ರಕಾಶ್​ ಕೆದ್ಲಾಯ ಉದ್ಘಾಟಿಸಿದರು. ಬನಶಂಕರಿ ಎಚ್​.ಆರ್​., ಶಿವಕುಮಾರ್​ ಗುಂಡಗಿ, ಅಂಬೋರೆ ಪಿ. ಸುರೇಶ್​, ದಿನಕರ್​ ಶೆಟ್ಟಿ ಅಂಪಾರು, ಹರಿಶ್ಚಂದ ಅಮೀನ್​, ಕೃಷ್ಣ ಕೆ., ಮಂಜುನಾಥ್​ ಎಸ್​.ಕೆ., ಅನಿಲ್​ ಎಚ್​. ಕೆರೆಸೂರ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಕೋ-ಆಪರೇಟಿವ್​ ಬ್ಯಾಂಕ್​ಗಳ ವಿಚಾರ ಸಂಕಿರಣವನ್ನು ಎಚ್​.ಜಯಪ್ರಕಾಶ್​ ಕೆದ್ಲಾಯ ಉದ್ಘಾಟಿಸಿದರು. ಬನಶಂಕರಿ ಎಚ್​.ಆರ್​., ಶಿವಕುಮಾರ್​ ಗುಂಡಗಿ, ಅಂಬೋರೆ ಪಿ. ಸುರೇಶ್​, ದಿನಕರ್​ ಶೆಟ್ಟಿ ಅಂಪಾರು, ಹರಿಶ್ಚಂದ ಅಮೀನ್​, ಕೃಷ್ಣ ಕೆ., ಮಂಜುನಾಥ್​ ಎಸ್​.ಕೆ., ಅನಿಲ್​ ಎಚ್​. ಕೆರೆಸೂರ್​ ಇತರರಿದ್ದರು.
Published on

ಮಹಾಮಂಡಳದ ನಿರ್ದೇಶಕ

ಎಚ್​.ಜಯಪ್ರಕಾಶ್​ ಕೆದ್ಲಾಯ ಅನಿಸಿಕೆ

ಉಡುಪಿಯ

ಲ್ಲಿ

ಸಹಕಾರಿಗಳ ವಿಚಾರ ಸಂಕಿರಣ ಉದ್ಘಾಟನೆ

ಉಡುಪಿ: ಪಟ್ಟಣ ಸಹಕಾರಿ ಬ್ಯಾಂಕ್​ಗಳು ಸಾಂಪ್ರದಾಯಿಕ ಹಳೆಯ ವ್ಯವಸ್ಥೆಯಿಂದ ನೂತನ ತಂತ್ರಜ್ಞಾನ ಹಾಗೂ ವೃತ್ತಿಪರ ವ್ಯವಸ್ಥೆಗೆ ಹೊಂದಿಕೊಂಡಿದೆ. ಬ್ಯಾಂಕ್​ನ ನಿರ್ದೇಶಕರು ಸದಸ್ಯರ ಪ್ರತಿನಿಧಿಯಾಗಿ ಠೇವಣಿದಾರರ ರಕ್ಷಕರಾಗಿ ಬ್ಯಾಂಕ್​ನ ಭವಿಷ್ಯದ ಶಿಲ್ಪಿಯಾಗಬೇಕು. ಪಾರದರ್ಶಕ ಹಾಗೂ ಜವಾಬ್ದಾರಿಯಿಂದ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್​ಗಳ ಮಹಾಮಂಡಳದ ನಿರ್ದೇಶಕ ಮತ್ತು ಉಡುಪಿ ಕೋ-ಆಪರೇಟಿವ್​ ಟೌನ್​ ಬ್ಯಾಂಕ್​ನ ಅಧ್ಯಕ್ಷ ಎಚ್​.ಜಯಪ್ರಕಾಶ್​ ಕೆದ್ಲಾಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಲೀಕೋ ಬ್ಯಾಂಕ್​ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್​ಗಳ ಮಹಾಮಂಡಳದ ವತಿಯಿಂದ ರಾಜ್ಯದ ಎಲ್ಲ ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್​ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲ ಪಟ್ಟಣ ಸಹಕಾರ ಬ್ಯಾಂಕ್​ಗಳ ಬಗ್ಗೆ ಮಹಾಮಂಡಳದ ಅಧ್ಯಕ್ಷ ಎಚ್​.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಕೈಗೊಳ್ಳುತ್ತಿರುವ ಉಪಯುಕ್ತ ಸಲಹೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಅರ್ಬನ್​ ಬ್ಯಾಂಕ್​ಗಳಲ್ಲಿ ಹೊಸ ಪೀಳಿಗೆಯವರು ವ್ಯವಹಾರ ನಡೆಸಬೇಕಾದರೆ ತಂತ್ರಜ್ಞಾನ ಅಳವಡಿಕೆ ಹಾಗೂ ಬಳಕೆ ಕುರಿತು ತಿಳಿಸಲಾಯಿತು.
ಮಹಾಮಂಡಳದ ನಿರ್ದೇಶಕರಾದ ಬನಶಂಕರಿ ಎಚ್​.ಆರ್​., ಶಿವಕುಮಾರ್​ ಗುಂಡಗಿ, ಅಂಬೋರೆ ಪಿ. ಸುರೇಶ್​, ಟೀಚರ್ಸ್​ ಕೋ-ಆಪರೇಟಿವ್​ ಬ್ಯಾಂಕ್​ನ ಅಧ್ಯಕ್ಷ ದಿನಕರ್​ ಶೆಟ್ಟಿ ಅಂಪಾರು, ನಾರಾಯಣ ಗುರು ಅರ್ಬನ್​ ಕೋ-ಆಪರೇಟಿವ್​ ಬ್ಯಾಂಕ್​ನ ಅಧ್ಯಕ್ಷ ಹರಿಶ್ಚಂದ ಅಮೀನ್​, ಲೀಕೋ ಬ್ಯಾಂಕ್​ನ ಅಧ್ಯಕ್ಷ ಕೃಷ್ಣ ಕೆ., ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ನ ವೃತ್ತಿಪರ ನಿರ್ದೇಶಕ ಮಂಜುನಾಥ್​ ಎಸ್​.ಕೆ. ಉಪಸ್ಥಿತರಿದ್ದರು.
ಮಹಾಮಂಡಳದ ಡೆಪ್ಯುಟಿ ಸಿಇಒ ಅನಿಲ್​ ಎಚ್​. ಕೆರೆಸೂರ್​ ಸ್ವಾಗತಿಸಿದರು. ಲೀಕೋ ಬ್ಯಾಂಕ್​ನ ಇಒ ಶಶಿಕಲಾ ಪುರುಷೋತ್ತಮ್​ ವಂದಿಸಿದರು. ಮಹಾಮಂಡಳದ ಗೌರವ ಸಲಹೆಗಾರರಾದ ಸುಧಾಕರ್​ ಭಟ್​ ಹಾಗೂ ಡಾ. ಗುರುಸ್ವಾಮಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net