ಆ.23ರಂದು ಸಂಜೆ 7 ಗಂಟೆಯ ವೇಳೆಯಲ್ಲಿ ಅಪ್ಪ-ಅಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರ ಮೇಲೆ ಒಂದಿಷ್ಟೂ ಕನಿಕರವಿಲ್ಲದೆ ಸುತ್ತಿಗೆಯಿಂದ ಪದೇಪದೆ ಹೊಡೆದು ಕೊಂದಿದ್ದಾನೆ. ರಾತ್ರಿಯಿಡೀ ಸುಮ್ಮನೆ ಇದ್ದ ಆತ, ಸೋಮವಾರ (ಆ.24) ಬೆಳಗ್ಗೆ 9 ಗಂಟೆಗೆ 112 ನಂಬರ್ ಕರೆ ಮಾಡಿ ತಾನು ತಂದೆ-ತಾಯಿಯನ್ನು ನಿನ್ನೆ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.