ಜನ್ಮ ದಿನದ ಹೆಸರಲ್ಲಿ ಸಾಮಾಜಿಕ ಸೇವೆ

ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ
 ಉಚ್ಚಿಲದಲ್ಲಿ ರಕ್ತದಾನ ಶಿಬಿರವನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿದರು. ಪ್ರಮುಖರಾದ ಜಯ ಸಿ.ಕೋಟ್ಯಾನ್, ಮೋಹನ್ ಬೆಂಗ್ರೆ, ಡಾ.ಶಮೀ ಶಾಸ್ತ್ರಿ, ಕವಿತಾ ಶರತ್, ರವೀಶ್ ಕೊರವಡಿ, ಶರಣ್‌ಕುಮಾರ್, ಗಿರಿಧರ ಸುವರ್ಣ, ಮನೋಜ್ ಕಾಂಚನ್, ರತ್ನಾಕರ ಸಾಲ್ಯಾನ್, ಸುಗುಣ ಕರ್ಕೇರ ಮತ್ತಿತರರಿದ್ದರು.
ಉಚ್ಚಿಲದಲ್ಲಿ ರಕ್ತದಾನ ಶಿಬಿರವನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿದರು. ಪ್ರಮುಖರಾದ ಜಯ ಸಿ.ಕೋಟ್ಯಾನ್, ಮೋಹನ್ ಬೆಂಗ್ರೆ, ಡಾ.ಶಮೀ ಶಾಸ್ತ್ರಿ, ಕವಿತಾ ಶರತ್, ರವೀಶ್ ಕೊರವಡಿ, ಶರಣ್‌ಕುಮಾರ್, ಗಿರಿಧರ ಸುವರ್ಣ, ಮನೋಜ್ ಕಾಂಚನ್, ರತ್ನಾಕರ ಸಾಲ್ಯಾನ್, ಸುಗುಣ ಕರ್ಕೇರ ಮತ್ತಿತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜನರನ್ನು ಒಗ್ಗೂಡಿಸಿಕೊಂಡು ಅವರ ಜತೆಗಿದ್ದು ಸೇವೆ ಮಾಡುವುದು ಮುಖ್ಯ ಸೇವೆಯಾಗಿದೆ. ಹುಟ್ಟುಹಬ್ಬದ ಹೆಸರಿನಲ್ಲಿ ನಡೆಸುತ್ತಿರುವ ರಕ್ತದಾನ ಶಿಬಿರದಿಂದ ಮನಸ್ಸು ತುಂಬಿದೆ. ಇದಕ್ಕೆ ಪರ್ಯಾಯವಾದ ಸೇವೆಯಿಲ್ಲ ಎಂದು ನಾಡೋಜ ಜಿ.ಶಂಕರ್ ಹೇಳಿದರು.

ನಾಡೋಜ ಜಿ.ಶಂಕರ್ ಅವರ ಜನ್ಮದಿನ ಅಂಗವಾಗಿ ಕೆ.ಎಂ.ಸಿ. ಮಣಿಪಾಲದ ರಕ್ತನಿಧಿ ಕೇಂದ್ರ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ ಹಾಗೂ ಉಡುಪಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಮೊಗವೀರ ಸಂಘಟನೆಗಳು, ಯುವಕ-ಯುವತಿ ವೃಂದಗಳು ಹಾಗೂ ಉಡುಪಿ ಜಿಲ್ಲಾಡಳಿತ ಸಹಯೋಗದಲ್ಲಿ ಉಚ್ಚಿಲದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ಕೆಎಂಸಿ ರಕ್ತನಿಧಿ ಕೇಂದ್ರದ ಡಾ.ಶಮೀ ಶಾಸ್ತ್ರಿ, ಉದಯ್ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು ಮಾತನಾಡಿದರು.

ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಮೊಗವೀರ ಯುವ ಸಂಘಟನೆ ನಿಕಟಪೂರ್ವ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಕಾಪು ನಾಲ್ಕುಪಟ್ನ ಮೊಗವೀರ ಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಒಕ್ಕೂಟ ಅಧ್ಯಕ್ಷೆ ಸುಗುಣಾ ಎಸ್.ಕರ್ಕೇರ, ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷ ಎಸ್.ದಿವಾಕರ ಹೆಜ್ಮಾಡಿ, ಯುವತಿ ವೃಂದದ ಅಧ್ಯಕ್ಷೆ ರೂಪಾ ಹೇಮಾನಂದ್ ಪುತ್ರನ್, ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ರಿತೇಶ್ ಸುವರ್ಣ, ಟೀಂ ಮಾರುತಿ ಬಳಗ ಅಧ್ಯಕ್ಷ ಪ್ರಹಾರ್ ಮೂಳೂರು ಉಪಸ್ಥಿತರಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್ ವಂದಿಸಿದರು. ಅಶೋಕ್ ತೆಕ್ಕಟ್ಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net