ಲಕ್ಷ್ಮೀ ವೆಂಕಟೇಶ ದೇಗುಲದಲ್ಲಿ ಶಾರದಾ ಮಹೋತ್ಸವ

ಉಡುಪಿಯ ಲಕ್ಷ್ಮೀ ವೆಂಕಟೇಶ ದೇಗುಲದಲ್ಲಿ ಶಾರದಾ ಮಹೋತ್ಸವ
ಉಡುಪಿಯ ಲಕ್ಷ್ಮೀ ವೆಂಕಟೇಶ ದೇಗುಲದಲ್ಲಿ ಶಾರದಾ ಮಹೋತ್ಸವ
Published on: 

* ಅ.11ರಿಂದ 22ರ ವರೆಗೆ ವಿವಿಧ ಕಾರ್ಯಕ್ರಮ

ಉಡುಪಿ: ಉಡುಪಿ ವಿ.ಟಿ. ರಸ್ತೆ ಮಾರ್ಗದ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಮಹೋತ್ಸವ ಸಮಿತಿಯಿಂದ 24ನೇ ವರ್ಷದ ಶಾರದಾ ಮಹೋತ್ಸವ ಕಾರ್ಯಕ್ರಮ ಅ.11ರಿಂದ ಆರಂಭಗೊಳ್ಳಲಿದೆ. ಉತ್ಸವದ ನಿಮಿತ್ತ ಅ.22ರ ವರೆಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ.11ರಿಂದ 20ರ ವರೆಗೆ ಪ್ರತಿದಿನ ಸಂಜೆ 5 ಗಂಟೆಗೆ ದುರ್ಗಾ ನಮಸ್ಕಾರ ನಡೆಯಲಿದೆ. ಅ.15ರಂದು ಸಂಜೆ 6:30ಕ್ಕೆ ಶಾರದಾ ದೇವಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು, ಅ.16ರಂದು ಬೆಳಗ್ಗೆ 8:30ಕ್ಕೆ ಪ್ರತಿಷ್ಠಾಪನೆ ನಡೆಯಲಿದೆ.

ಅ.19ರಂದು ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯಿಂದ ಸಾಮೂಹಿಕ ದುರ್ಗಾ ನಮಸ್ಕಾರ, ಅ.20ರಂದು ರಾತ್ರಿ 8ಕ್ಕೆ ದೀಪಾಲಂಕಾರ ಸೇವೆ, ರಾತ್ರಿ 8:30ಕ್ಕೆ ದೇವಿಯ ವಿಸರ್ಜನಾ ಪೂಜೆ ನೆರವೇರಲಿದೆ.

ಅ.21ರ ವಿಜಯ ದಶಮಿಯಂದು ಬೆಳಗ್ಗೆ 7:35ಕ್ಕೆ ಚಂಡಿಕಾ ಹವನ, ಮಧ್ಯಾಹ್ನ 1:30ಕ್ಕೆ ದೇವಿಯ ಸೀರೆಗಳ ಏಲಂ, ಅ.22ರಂದು ದೇವಿಯ ವಿಗ್ರಹ ವಿಸರ್ಜನೆ ನಿಮಿತ್ತ ಸಂಜೆ 6 ಗಂಟೆಗೆ ಶೋಭಾಯಾತ್ರೆ ನಡೆಯಲಿದೆ.

ಕಮಲನಾಥ ರಂಗಮಂಟಪದಲ್ಲಿ ಅ.16ರಿಂದ 19ರ ವರೆಗೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.21ರಂದು ಸಂಜೆ 6ಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯ ವಾರ್ಷಿಕೋತ್ಸವ ಸಮಾರಂಭ, ಅ.22ರಂದು ರಾತ್ರಿ 9ಕ್ಕೆ 'ದಾಂಡಿಯಾ ಖೇಳುಯಾ' ಕಾರ್ಯಕ್ರಮ ನಡೆಯಲಿದೆ ಎಂದು ಶಾರದಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net