ಮಹಾಲಕ್ಷ್ಮೀ ಬ್ಯಾಂಕ್​ಗೆ 'ಸಾಧನಾ' ಪ್ರಶಸ್ತಿ

ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ವಾರ್ಷಿಕ ಮಹಾಸಭೆಯಲ್ಲಿ ಡಾ.ಎಂ.ಎನ್​. ರಾಜೇಂದ್ರಕುಮಾರ್​ ಅವರು ಯಶ್​ಪಾಲ್​ ಸುವರ್ಣ ಅವರಿಗೆ 'ಸಾಧನಾ' ಪ್ರಶಸ್ತಿ ಪ್ರದಾನ ಮಾಡಿದರು. ಜಯಕರ್​ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್​ ಶೆಟ್ಟಿ ಹಾಗೂ ಸಹಕಾರಿ ಮುಖಂಡರು ಇದ್ದರು.
ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ವಾರ್ಷಿಕ ಮಹಾಸಭೆಯಲ್ಲಿ ಡಾ.ಎಂ.ಎನ್​. ರಾಜೇಂದ್ರಕುಮಾರ್​ ಅವರು ಯಶ್​ಪಾಲ್​ ಸುವರ್ಣ ಅವರಿಗೆ 'ಸಾಧನಾ' ಪ್ರಶಸ್ತಿ ಪ್ರದಾನ ಮಾಡಿದರು. ಜಯಕರ್​ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್​ ಶೆಟ್ಟಿ ಹಾಗೂ ಸಹಕಾರಿ ಮುಖಂಡರು ಇದ್ದರು.
Published on

* ಸತತ 10ನೇ ಬಾರಿಗೆ ಗೌರವದ ಹೆಗ್ಗಳಿಕೆ 

* ಪುರಸ್ಕಾರ ಸ್ವೀಕರಿಸಿದ ಯಶ್​ಪಾಲ್​ ಸುವರ್ಣ

ಉಡುಪಿ: ಕರಾವಳಿಯ ಪ್ರತಿಷ್ಠಿತ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಉಡುಪಿಯ 2025&-26ನೇ ಸಾಲಿನ ಸರ್ವತೋಮುಖ ಸಾಧನೆಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಿಂದ 'ಸಾಧನಾ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಸತತ 10ನೇ ಬಾರಿಗೆ ಈ ಪುರಸ್ಕಾರ ಲಭಿಸಿದ ಕೀರ್ತಿಗೂ ಸಹ ಬ್ಯಾಂಕ್​ ಭಾಜನವಾಗಿದೆ.
ಮಂಗಳೂರಿನಲ್ಲಿ ಶನಿವಾರ (ಆ.22) ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ವಾರ್ಷಿಕ ಮಹಾಸಭೆಯಲ್ಲಿ ಡಾ.ಎಂ.ಎನ್​. ರಾಜೇಂದ್ರಕುಮಾರ್​ ಅವರಿಂದ ಬ್ಯಾಂಕ್​ನ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಪ್ರಶಸ್ತಿ ಸ್ವೀಕರಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ 8 ಶಾಖೆಗಳ ಮೂಲಕ ಪ್ರಸಕ್ತ ಸಾಲಿನಲ್ಲಿ 1,200 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದೆ. ತನ್ಮೂಲಕ ಕರಾವಳಿ ಭಾಗದಲ್ಲಿಯೇ ಅತಿ ಹೆಚ್ಚು ಡಿವಿಡೆಂಡ್​ ನೀಡುವ ಅಗ್ರಗಣ್ಯ ಪಟ್ಟಣ ಸಹಕಾರಿ ಬ್ಯಾಂಕ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
"

ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಆಧುನಿಕ ವ್ಯವಸ್ಥೆಯೊಂದಿಗೆ ಸುಸಜ್ಜಿತ ಶಾಖೆಗಳನ್ನೂ ಹೊಂದಿದೆ. ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತ ಸರ್ವಾಂಗೀಣ ಪ್ರಗತಿ ಸಾಧಿಸಿದೆ. ಬ್ಯಾಂಕ್​ನ ಉತ್ತಮ ಕಾರ್ಯವೈಖರಿಗೆ ಈ ಬಾರಿಯೂ ಸಹ ಪ್ರತಿಷ್ಠಿತ 'ಸಾಧನಾ' ಪ್ರಶಸ್ತಿ ಲಭಿಸಿದೆ. ಈ ಪುರಸ್ಕಾರ ಲಭಿಸಲು ಬ್ಯಾಂಕ್​ನ ಆಡಳಿತ ಮಂಡಳಿ, ನೌಕರರು, ಸಿಬ್ಬಂದಿ ಶ್ರಮ ಹಾಗೂ ಗ್ರಾಹಕರ ಪ್ರೋತ್ಸಾಹವೇ ಕಾರಣವಾಗಿದೆ.

— ಯಶ್​ಪಾಲ್​ ಸುವರ್ಣ. ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ನ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net