ಉತ್ತಮ ರಸ್ತೆ ಸಂಪರ್ಕದಿಂದ ಗ್ರಾಮೀಣಾಭಿವೃದ್ಧಿ

ಉಡುಪಿಯ ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗ್ರಾಮಸ್ಥರೊಂದಿಗೆ ಯಶ್​ಪಾಲ್​ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು. ರಾಜೀವ ಕುಲಾಲ್​, ಮಹೇಶ ಕೋಟ್ಯಾನ್​, ರಾಜು ಪೂಜಾರಿ, ಸತೀಶ ಪೂಜಾರಿ, ಸುರೇಶ ಪೂಜಾರಿ, ಹೆರಿಯ, ಅಶ್ವಿನ ರೋಚ್​, ಪ್ರಭಾಕರ, ಬೇಬಿ, ಶಾರದಾ, ಮಮತಾ, ಅಮ್ಮಣ್ಣಿ, ವಸಂತಿ, ಆಶಾ, ಸಂಗೀತಾ ಇತರರಿದ್ದರು.

Published on: 

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯ

* ಉಪ್ಪೂರಿನಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಉಡುಪಿ: ಗ್ರಾಮೀಣ ಭಾಗದ ಅಭಿವೃದ್ಧಿಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮವಾದ ರಸ್ತೆ ಸಂಪರ್ಕ ಹಾಗೂ ಸೌಕರ್ಯ ಇದ್ದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಯಾಗಲು ಸಾಧ್ಯ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳಿಗೂ ಉತ್ತಮ ರಸ್ತೆ ಸೌಲಭ್ಯ ಒದಗಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.

ಉಡುಪಿಯ ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶುಕ್ರವಾರ (ನ.20) ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಅನುದಾನ ಬಿಡುಗಡೆ

ಅಮ್ಮುಂಜೆ ಸಂದೀಪ ಅವರ ಮನೆಯ ಸಮೀಪದಿಂದ ಉದಯ ಪೂಜಾರಿ ಮನೆಯವರೆಗೆ 25 ಲಕ್ಷ ರೂ., ಉಗ್ಗೇಲಬೆಟ್ಟು ಸುಮತಿ ಅವರ ಮನೆಯಿಂದ ಸದಾಶಿವ ಬಂಗೇರ ಮನೆಯ ತನಕ 25 ಲಕ್ಷ ರೂ., ಮೂಡು ಅಮ್ಮುಂಜೆ ದಿನೇಶ ಶೆಟ್ಟಿ ಅವರ ಮನೆಯಿಂದ ಕೃಷ್ಣ ಪೂಜಾರಿ ಮನೆಯವರೆಗೆ 25 ಲಕ್ಷ ರೂ., ಅಮ್ಮುಂಜೆ ಬೇಬಿ ಅವರ ಮನೆಯಿಂದ ಗಿರಿಜಾ ಬಂಗೇರ ಮನೆಯವರೆಗೆ 20 ಲಕ್ಷ ರೂ., ಉಗ್ಗೇಲಬೆಟ್ಟು ಪಿಳ್ಕಲ ಶೇಖರ ಪೂಜಾರಿ ಮನೆಯಿಂದ ಮಡಿವಾಳರಬೆಟ್ಟು ವರೆಗೆ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್​, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ ಕೋಟ್ಯಾನ್​, ರಾಜು ಪೂಜಾರಿ, ಸತೀಶ ಪೂಜಾರಿ, ಸುರೇಶ ಪೂಜಾರಿ, ಹೆರಿಯ, ಅಶ್ವಿನ ರೋಚ್​, ಪ್ರಭಾಕರ, ಬೇಬಿ, ಶಾರದಾ, ಮಮತಾ, ಅಮ್ಮಣ್ಣಿ, ವಸಂತಿ, ಆಶಾ, ಸಂಗೀತಾ, ಸುಜಾತಾ, ರಾಘವೇಂದ್ರ ಉಪ್ಪೂರು, ಕಿಟ್ಟ ಪೂಜಾರಿ, ಕೇಶವ ಪೂಜಾರಿ, ಪ್ರವೀಣ ಪೂಜಾರಿ, ರಾಜೀವಿ ಇನ್ನಿತರರು ಇದ್ದರು.