ಹಣಕಾಸು ಪಾರದರ್ಶಕತೆಯಲ್ಲಿ ಲೆಕ್ಕಪರಿಶೋಧನೆ ಪಾತ್ರ ಪ್ರಮುಖ

ಉಡುಪಿಯ ಡಾ.ಜಿ.ಶಂಕರ ಕಾಲೇಜ್​ನಲ್ಲಿ ಆಯೋಜಿಸಿದ್ದ ಆಡಿಟ್​ ದಿವಸ್​ ಕಾರ್ಯಾಗಾರದಲ್ಲಿ ಪ್ರೊ.ಡಾ.ನಿಕೇತನಾ ಮಾತನಾಡಿದರು. ಯಾಮಿನಿ ಟಿ.ಎಂ., ಡಾ. ಅಬ್ದುಲ್​ ರಜಾಕ್​, ಸಂತೋಷ ಪ್ರಭು ಎಂ. ಇದ್ದರು.
ಉಡುಪಿಯ ಡಾ.ಜಿ.ಶಂಕರ ಕಾಲೇಜ್​ನಲ್ಲಿ ಆಯೋಜಿಸಿದ್ದ ಆಡಿಟ್​ ದಿವಸ್​ ಕಾರ್ಯಾಗಾರದಲ್ಲಿ ಪ್ರೊ.ಡಾ.ನಿಕೇತನಾ ಮಾತನಾಡಿದರು. ಯಾಮಿನಿ ಟಿ.ಎಂ., ಡಾ. ಅಬ್ದುಲ್​ ರಜಾಕ್​, ಸಂತೋಷ ಪ್ರಭು ಎಂ. ಇದ್ದರು.
Published on: 

* ರಾಜ್ಯ ಉಪ ಮಹಾಲೇಖಪಾಲಕಿ ಯಾಮಿನಿ ಟಿ.ಎಂ. ಮಾಹಿತಿ

* ಡಾ. ಜಿ.ಶಂಕರ ಪದವಿ ಕಾಲೇಜ್​ನಲ್ಲಿ 'ಆಡಿಟ್​ ದಿವಸ್​' ಕಾರ್ಯಾಗಾರ

ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಹಾಗೂ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ಜವಾಬ್ದಾರಿ ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕ (ಸಿಎಜಿ)ರಿಗಿದೆ. ಯಾವುದೇ ಸಂಸ್ಥೆಯ ದಕ್ಷತೆ ಅದರ ಲೆಕ್ಕಪತ್ರಗಳ ನಿರ್ವಹಣೆಯ ಗುಣಮಟ್ಟ ನಿರ್ಧರಿಸುತ್ತದೆ. ಸಾರ್ವಜನಿಕ ಹಣಕಾಸು ಪಾರದರ್ಶಕತೆ, ಹೊಣೆಗಾರಿಕೆ ಖಾತರಿಪಡಿಸುವಲ್ಲಿ ಲೆಕ್ಕಪರಿಶೋಧನೆ ಪಾತ್ರ ಪ್ರಮುಖ ಎಂದು ರಾಜ್ಯದ ಉಪ ಮಹಾಲೇಖಪಾಲರಾದ ಯಾಮಿನಿ ಟಿ.ಎಂ. ತಿಳಿಸಿದರು.

ಉಡುಪಿ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 'ಲೆಕ್ಕಪರಿಶೋಧನಾ ದಿನಾಚರಣೆ (ಆಡಿಟ್​ ದಿವಸ್​)' ನಿಮಿತ್ತ ಶನಿವಾರ (ನ.21) ಆಯೋಜಿಸಿದ್ದ 'ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಕಚೇರಿಯ ಕುರಿತು ತಿಳಿಯಿರಿ ಮತ್ತು ಲೆಕ್ಕಪರಿಶೋಧಕರಾಗಿ' ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.

ರಾಜ್ಯದ ಉಪ ಮಹಾಲೇಖಪಾಲರಾದ ಯಾಮಿನಿ ಟಿ.ಎಂ. ಮಾತನಾಡಿದರು.
ರಾಜ್ಯದ ಉಪ ಮಹಾಲೇಖಪಾಲರಾದ ಯಾಮಿನಿ ಟಿ.ಎಂ. ಮಾತನಾಡಿದರು.

ಹಣ ಬಳಕೆಯಲ್ಲಿ ಪಾರದರ್ಶಕತೆ

ಲೆಕ್ಕಪರಿಶೋಧನಾ ವರದಿ ಸಿದ್ಧಪಡಿಸಿ ಸಂಸತ್​ನಲ್ಲಿ ಮಂಡಿಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಮಹಾಲೇಖಪಾಲರ ಕಚೇರಿಗಳ ಮೂಲಕ ಲೆಕ್ಕಪರಿಶೋಧನೆಯ ಕಾರ್ಯ ನಿರ್ವಹಿಸಲಾಗುತ್ತದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿಗಳು ವರದಿಗಳ ಪ್ರಮುಖ ಅಂಶ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯುವುದರಿಂದ ಸರ್ಕಾರಿ ಹಣದ ಬಳಕೆಯಲ್ಲಿ ಪಾರದರ್ಶಕತೆ ಸಾಧ್ಯವಾಗುತ್ತದೆ ಎಂದರು.

ಹಿರಿಯ ಲೆಕ್ಕಪರಿಶೋಧನಾಧಿಕಾರಿ ಮಲ್ಲಿಕೇಶ್ವರಿ ಸಿ. ಮಾತನಾಡಿದರು.
ಹಿರಿಯ ಲೆಕ್ಕಪರಿಶೋಧನಾಧಿಕಾರಿ ಮಲ್ಲಿಕೇಶ್ವರಿ ಸಿ. ಮಾತನಾಡಿದರು.

ಹಿರಿಯ ಲೆಕ್ಕಪರಿಶೋಧನಾಧಿಕಾರಿ ಮಲ್ಲಿಕೇಶ್ವರಿ ಸಿ. ಮಾತನಾಡಿ, ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.

ಸಹಾಯಕ ಲೆಕ್ಕಪರಿಶೋಧನಾಧಿಕಾರಿ ವಿಶಾಲಕುಮಾರ ಛತ್ವಾಣಿ, ಎಂಕಾಂ ವಿಭಾಗದ ಸಂಯೋಜಕ ಡಾ. ಅಬ್ದುಲ್​ ರಜಾಕ್​, ಸಹಾಯಕ ಪ್ರಾಧ್ಯಾಪಕರಾದ ಸಂತೋಷ ಪ್ರಭು ಎಂ., ರಾಕೇಶ, ಸೋನಿಯಾ ಮರಿಯೆಟ್​ ನೊರೊನ್ಹಾ ಹಾಗೂ ಸ್ಮಿತಾ ಉಪಸ್ಥಿತರಿದ್ದರು.

ಕಾಲೇಜ್​ನ ಐಕ್ಯೂಎಸಿ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಬೆಂಗಳೂರಿನ ಪ್ರಧಾನ ಮಹಾಲೇಖಪಾಲರ (ಲೆಕ್ಕಪರಿಶೋಧನೆ-1) ಕಚೇರಿಯು ಕಾರ್ಯಾಗಾರ ಆಯೋಜಿಸಲಾಗಿತ್ತು. ಲಹರಿ ಪ್ರಾರ್ಥಿಸಿದರು. ರಿಹಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಅಭಿಲಾಷಾ ಹೆಗ್ಡೆ ವಂದಿಸಿದರು.

ನಮ್ಮ ಕಾಲೇಜ್​ನ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳು ಚಾರ್ರ್ಟಡ್​ ಅಕೌಂಟೆಂಟ್​ ಆಗುವುದರ ಜತೆಗೆ ಸಿಎಜಿ ಕಚೇರಿಯಲ್ಲಿಯೂ ಉದ್ಯೋಗ ಪಡೆಯುವ ಗುರಿ ಹೊಂದಬೇಕು.
ಪ್ರೊ. ಡಾ.ನಿಕೇತನಾ. ಕಾಲೇಜ್​ನ ಪ್ರಾಂಶುಪಾಲೆ.