

ಉಡುಪಿ: ನರ್ನಾಡು ಮದಗ ಲೇಔಟ್ ಭಾಗದ ಜನರ ಬೇಡಿಕೆಯಂತೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಒದಗಿಸಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಸೀಮಿತ ಅನುದಾನದ ಲಭ್ಯತೆಯ ನಡುವೆಯೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಇನ್ನಷ್ಟು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಪ್ಪೂರು ಗ್ರಾಮದ ನರ್ನಾಡು ಮದಗ ಲೇಔಟ್ನಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು. ಮದಗ ಲೇಔಟ್ ನಾಗರಿಕರ ವೇದಿಕೆ ವತಿಯಿಂದ ಯಶ್ಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಉಪ್ಪೂರು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಕೋಟ್ಯಾನ್, ಮಾಜಿ ಸದಸ್ಯ, ಮದಗ ಲೇಔಟ್ ನಾಗರಿಕ ವೇದಿಕೆ ಅಧ್ಯಕ್ಷ ಶರತ್ ಪೂಜಾರಿ, ಗೌರವಾಧ್ಯಕ್ಷ ಹರೀಶ್ ಅಮೀನ್, ಕಾರ್ಯದರ್ಶಿ ಚನ್ನಕೇಶವ ಭಟ್, ವೇದಿಕೆಯ ಪದಾಧಿಕಾರಿಗಳು, ಲೇಔಟ್ನ ನಾಗರಿಕರು, ಚಿಣ್ಣರು ಉಪಸ್ಥಿತರಿದ್ದರು.