ಆರೋಪಿತರ ಪತ್ತೆಗಾಗಿ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಠಾಣೆಯ ಪಿಎಸ್ ಐ ತಿಮ್ಮೇಶ್ ಬಿ.ಎನ್., ಉಡುಪಿ ಸೈಬರ್ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ದೊಡ್ಡಮನಿ, ಅಪರಾಧ ವಿಭಾಗದ ಎಎಸ್ಐ ವಿವೇಕಾನಂದ, ಎಚ್ಸಿಗಳಾದ ಮಹಮ್ಮದ್ ಅಜ್ಮಲ್ ಹೈಕಾಡಿ, ಚೇತನ್, ಮಲ್ಪೆ ಠಾಣೆಯ ಲೋಕೇಶ್, ಉಡುಪಿ ನಗರ ಠಾಣೆಯ ಪಿಸಿ ಶಿವಕುಮಾರ್, ಬ್ರಹ್ಮಾವರ ಪೊಲೀಸ್ ಠಾಣೆಯ ಕಿರಣ್ ಇವರು ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಕರಿಂ ನಗರದ ಗೋವಿಂದಪಲ್ಲಿ ಎಂಬಲ್ಲಿ ಸಿಲ್ವರ್ ಸ್ಕೈ ಲಾಡ್ಜ್ನಲ್ಲಿ ತಂಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದರು. ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ರಾಜೇಶ್ ಅವರನ್ನು ಪತ್ತೆ ಹಚ್ಚಿ ರಕ್ಷಿಸಿ ಉಡುಪಿಗೆ ಕರೆತಂದಿದ್ದಾರೆ.