ರೈಲ್ವೆ ನಿಲ್ದಾಣ ಪರಿಸರ ದುರ್ವಾಸನೆ

 ರೈಲ್ವೆ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಾಶಿ ಬಿದ್ದಿರುವುದು.
ರೈಲ್ವೆ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಾಶಿ ಬಿದ್ದಿರುವುದು.
Published on

ಮೂಲ್ಕಿ: ರೈಲ್ವೆ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆ ಬದಿಯಲ್ಲಿ ಮನೆಯ ತ್ಯಾಜ್ಯವಸ್ತುಗಳು ರಾಶಿ ಬಿದ್ದಿದು,್ದ ದುರ್ವಾಸನೆಯುಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಮೂಲ್ಕಿ ರೈಲ್ವೆ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಪ್ರಯಾಣಿಕರು ಆಗಮಿಸುತ್ತಿದ್ದು, ದೂರದ ಮುಂಬೈ ಸಹಿತ ವಿವಿಧೆಡೆಗಳಿಗೆ ಅನೇಕ ಪ್ರಯಾಣಿಕರು ತೆರಳುತ್ತಿರುತ್ತಾರೆ. ಈ ಸಂದರ್ಭ ರೈಲ್ವೆ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಮೂಲ್ಕಿ ರೈಲ್ವೆ ನಿಲ್ದಾಣದ ಆಟೋ ಪಾರ್ಕಿಂಗ್ ಸ್ಥಳದಲ್ಲಿ ಕಳೆದ ಹಲವಾರು ತಿಂಗಳಿನಿಂದ ತ್ಯಾಜ್ಯ ಹಾಕುವ ಸಿಮೆಂಟ್ ಬುಟ್ಟಿ ಕಸ ಕಡ್ಡಿಗಳಿಂದ ತುಂಬಿ ತುಳುಕಿ ಹೊರಗಡೆ ಚೆಲ್ಲಾಪಿಲ್ಲಿಯಾಗಿ ಬಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ರೋಗದ ಭೀತಿ ಎದುರಾಗಿದೆ.
ಈ ಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊತ್ತಿ ಉರಿಸುತ್ತಿದ್ದಾರೆ. ಇದೇ ರೀತಿ ರೈಲ್ವೆ ನಿಲ್ದಾಣಕ್ಕೆ ಬರುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದ್ದು, ಸ್ವಚ್ಛತೆ ಇಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ಮಲೇರಿಯಾ ಸಹಿತ ಸಾಂಕ್ರಮಿಕ ರೋಗಗಳು ಹರಡುವ ಈ ದಿನಗಳಲ್ಲಿ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದು ಬಹಳ ಅಗತ್ಯ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಘೆ

, ಮಲೇರಿಯಾ ಆತಂಕ

ಆಹಾರದ ಆಸೆಗೆ ಪ್ರಾಣಿಗಳು ತ್ಯಾಜ್ಯವನ್ನು ಎಳೆದುಹಾಕಿ ಚೆಲ್ಲಾಡುತ್ತಿರುವುದು ಇಲ್ಲಿ ಸಾಮಾನ್ಯ ದೃಶ್ಯ. ನೆಲಕ್ಕೆ ಬಿದ್ದ ಹಾಗೂ ಪ್ರಾಣಿಗಳು ತಿಂದುಳಿಸಿದ ತ್ಯಾಜ್ಯ ಕೊಳೆತು ವಾಸನೆ ಬರುವ ಮೂಲಕ ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸಾರ್ವಜನಿಕರ ಆಕ್ರೋಶ. ಡೆಂೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಿಕ್ಷಾ ಪಾರ್ಕ್ ಬಳಿ ಮುಂಜಾನೆ ಕಸ ಎಸೆದು ಹೊಗುವವರಿದ್ದಾರೆ. ಎಸೆದ ಕಸ ತ್ಯಾಜ್ಯದಲ್ಲಿ ಆಹಾರದ ಆಸೆಗೆ ನಾಯಿ, ಬೆಕ್ಕುಗಳು ಎಳೆದು ಚೆಲ್ಲಾಡುವುದರಿಂದ ಸಮಸ್ಯೆಯಾಗುತ್ತದೆ. ಎರಡು ದಿನಕ್ಕೊಮ್ಮೆಯಾದರೂ ಕಸ ವಿಲೇವಾರಿ ನಡೆಸಿದರೆ ಸಮಸ್ಯೆಯಾಗದು.

— ನಿರಂಜನ್ ಕಿನ್ನಿಗೋಳಿ, ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net