ಫೆ.28ರಿಂದ ಕಾಪು ಹೊಸ ಮಾರಿಗುಡಿ ದೇಗುಲದ ಪ್ರಥಮ ವರ್ಧಂತಿ ಉತ್ಸವ

ಉಡುಪಿಯ ಡಿಸಿ ಕಚೇರಿಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಗುರ್ಮೆ ಸುರೇಶ್​ ಶೆಟ್ಟಿ, ಸ್ವರೂಪಾ ಟಿ.ಕೆ., ಕೆ. ವಾಸುದೇವ ಶೆಟ್ಟಿ, ರತ್ನಾಕರ್​ ಶೆಟ್ಟಿ ನಡಿಕೆರೆ ಇತರರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಗುರ್ಮೆ ಸುರೇಶ್​ ಶೆಟ್ಟಿ, ಸ್ವರೂಪಾ ಟಿ.ಕೆ., ಕೆ. ವಾಸುದೇವ ಶೆಟ್ಟಿ, ರತ್ನಾಕರ್​ ಶೆಟ್ಟಿ ನಡಿಕೆರೆ ಇತರರಿದ್ದರು.
Published on

* ಉಡುಪಿ ಡಿಸಿ ಕಚೇರಿಯಲ್ಲಿ 'ಮಾತೃ ವೈಭವ' ಪೂರ್ವಭಾವಿ ಸಭೆ

ಉಡುಪಿ: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ 'ಮಾತೃ ವೈಭವ' ಕಾರ್ಯಕ್ರಮ ಫೆ.28ರಿಂದ ಮಾ.3ರ ವರೆಗೆ ನಡೆಯಲಿದ್ದು, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋರ್ಟ್​ ಹಾಲ್​ನಲ್ಲಿ ಸೋಮವಾರ (ಫೆ.23) ಪೂರ್ವಭಾವಿ ಸಭೆ ನಡೆಯಿತು.
ದೇವಸ್ಥಾನದ ಜೀಣೋರ್ದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, 3 ದಿನಗಳ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ದಿನಗಳಂದು ಸುಗಮ ವಾಹನ ಸಂಚಾರ ಹಾಗೂ ಸಮರ್ಪಕ ಪಾರ್ಕಿಂಗ್​ ವ್ಯವಸ್ಥೆ ನಿರ್ವಹಿಸುವಂತೆ ಚರ್ಚಿಸಲಾಯಿತು.
ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ್​ ಶೆಟ್ಟಿ ನಡಿಕೆರೆ ಮಾತನಾಡಿದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್​, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್​ ಹೆಗ್ಡೆ ಕಲ್ಯ, ಮಾತೃ ವೈಭವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್​ ವಿ. ಶೆಟ್ಟಿ, ಮಾತೃ ವೈಭವ ಸೇವಾ ಸಮಿತಿ ಹುಬ್ಬಳ್ಳಿ ವಲಯದ ಕಾರ್ಯಾಧ್ಯಕ್ಷ ಸುಗ್ಗಿ ಸುಧಾಕರ್​ ಶೆಟ್ಟಿ, ಮಾತೃ ವೈಭವದ ಕಾನೂನು ಸುವ್ಯವಸ್ಥೆ ಸಮಿತಿಯ ಪ್ರಧಾನ ಸಂಚಾಲಕ ರೋಷನ್​ ಕುಮಾರ್​ ಶೆಟ್ಟಿ, ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ, ಪೊಲೀಸ್​ ಉಪ ನಿರೀಕ್ಷಕ ತೇಜಸ್ವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net