ಕಡಲ ಕಿನಾರೆಯಲ್ಲಿ ಪಿತೃಗಳಿಗೆ ಪಿಂಡ ಪ್ರದಾನ

ಉಡುಪಿ ಮಲ್ಪೆಯ ಕಡಲ ತೀರಲದಲ್ಲಿ ಅನೇಕ ಕುಟುಂಬದವರು ಅರ್ಚಕರ ಮೂಲಕ ಪಿಂಡ ಪ್ರದಾನ, ತರ್ಪಣ ಕಾರ್ಯ ನೆರವೇರಿಸಿ ಮಹಾಲಯ ಅಮವಾಸ್ಯೆ ಆಚರಿಸಿದರು.
ಉಡುಪಿ ಮಲ್ಪೆಯ ಕಡಲ ತೀರಲದಲ್ಲಿ ಅನೇಕ ಕುಟುಂಬದವರು ಅರ್ಚಕರ ಮೂಲಕ ಪಿಂಡ ಪ್ರದಾನ, ತರ್ಪಣ ಕಾರ್ಯ ನೆರವೇರಿಸಿ ಮಹಾಲಯ ಅಮವಾಸ್ಯೆ ಆಚರಿಸಿದರು.
Published on: 

* ಮಹಾಲಯ ಅಮಾವಾಸ್ಯೆ ಆಚರಣೆ

ಉಡುಪಿ: ಪಿತೃಪಕ್ಷದ ಸಂದರ್ಭದಲ್ಲಿ ಆಗಮಿಸುವ ಮಹಾಲಯ ಅಮಾವಾಸ್ಯೆ ನಿಮಿತ್ತ ಉಡುಪಿ ಜಿಲ್ಲೆಯ ವಿವಿಧೆಡೆ ಕಡಲ ಕಿನಾರೆಗಳಲ್ಲಿ ಸಾವಿರಾರು ಕುಟುಂಬದವರು ಗತಿಸಿಹೋದ ತಮ್ಮ ಹಿರಿಯರು ಹಾಗೂ ಪಿತೃಗಳಿಗೆ ಶನಿವಾರ (ಅ.10) ತರ್ಪಣದೊಂದಿಗೆ ಪಿಂಡ ಪ್ರದಾನ ಮಾಡಿದರು.

ಮನೆಯ ಸದಸ್ಯರು ಅಥವಾ ಹಿರಿಯರು ತೀರಿಹೋದ ಬಳಿಕ ಸಕಾಲಕ್ಕೆ ಅವರಿಗೆ ಶ್ರಾದ್ಧ&ತಿಥಿ ಅಥವಾ ಮಾಸಿಕ, ವರ್ಷಾಂತಿಕವನ್ನು ಕಾರಣಾಂತರದಿಂದ ನೆರವೇರಿಸಲು ಸಾಧ್ಯವಾಗಿರುವುದಿಲ್ಲ. ಅಂತಹ ಕುಟುಂಬದವರು ಪಿಂಡ ಪ್ರದಾನದ ಮೂಲಕ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ಕೋರುವುದು ಈದಿನದ ಆಚರಣೆಯಾಗಿದೆ.

ಮಲ್ಪೆ ಕಡಲ ತೀರ ಸೇರಿದಂತೆ ವಿವಿಧ ಕಡೆಗಳಲ್ಲಿ ಅರ್ಚಕರ ಮೂಲಕ ನೂರಾರು ಕುಟುಂಬದವರು ಪಿಂಡ ಪ್ರದಾನದ ವಿಧಿ-ವಿಧಾನ ನೆರವೇರಿಸಿ ಮಹಾಲಯ ಅಮಾವಾಸ್ಯೆ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net