

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಗ್ರಾಮಾಭಿವೃದ್ಧಿಗಾಗಿ ನೇಮಕಗೊಂಡ ಪಿಡಿಒಗಳಿಗೆ ಬೀದಿ ನಾಯಿ ಹಾವಳಿ ತಡೆಯುವ ಬಗ್ಗೆ ನೋಡಲ್ ಅಧಿಕಾರಿಯಾಗಿ ಹಾಗೂ ಹಾವುಗಳ ಉಪಟಳ ತಡೆಯುವ ನಿಟ್ಟಿನಲ್ಲಿ ತರಬೇತಿ ನೀಡುವ ಹೊಣೆಗಾರಿಕೆ ನೀಡಲಾಗಿದೆ.
ಇ ಸ್ವತ್ತು, ಭೂ ಗ್ಯಾರಂಟಿ, ಇ-ಖಾತಾ ಅಭಿಯಾನ, ಗ್ರಾಮೀಣ ಆಡಳಿತ, ವ್ಯಾಪಾರ ಪರವಾನಗಿ, ಕಟ್ಟಡ ಪರವಾನಗಿ ಸಹಿತ ಬಾಪೂಜಿ ಕೇಂದ್ರದ ಸೇವೆಗಳು, ಕುಡಿಯುವ ನೀರು, ವಸತಿ, ವಿಬಿಜಿ ರಾಮ್ಜಿ ಸಹಿತ ಅತೀ ಅಗತ್ಯದ ಕಾರ್ಯನಿರ್ವಹಿಸುವ ಜತೆಗೆ ಇತರ ಇಲಾಖೆಗಳ ಜವಾಬ್ದಾರಿಯನ್ನೂ ಹೊತ್ತು ಪೂರ್ಣಕಾಲಿಕ ಕಾರ್ಯದರ್ಶಿ, ಲೆಕ್ಕಾಧಿಕಾರಿ/ದ್ವಿ.ದ.ಸ., ಇತರ ಸಿಬ್ಬಂದಿ ಕೊರತೆ ಹಾಗೂ ಪ್ರಭಾರಗಳ ಭಾರದಿಂದ, ವಿಡಿಯೋ ಕಾನ್ಫರೆನ್ಸ್, ಸರಣಿ ಸಭೆಗಳ ಒತ್ತಡದಿಂದ ಪಿಡಿಒಗಳು ಹೈರಾಣಾಗಿದ್ದಾರೆ.
ಬೀದಿ ನಾಯಿ ಹಾವಳಿ ತಡೆ ಬಗ್ಗೆ ಈಗಾಗಲೇ ಗ್ರಾಪಂ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವೆಡೆ ಬೀದಿ ನಾಯಿಗಳ ಆಶ್ರಯ ಕೇಂದ್ರಕ್ಕೆ ಜಮೀನು ಗುರುತಿಸುವ ಕೆಲಸವೂ ನಡೆಯುತ್ತಿದೆ. ಮುಂದುವರಿದು ನ.19ರಂದು ಪಂಚಾಯತ್ ರಾಜ್ ಆಯುಕ್ತರು ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಗ್ರಾಪಂ ಇಲಾಖೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ತರಬೇತಿ ನೀಡುವ ಬಗ್ಗೆ ಕೂಡ ಸೂಚಿಸಿದ್ದಾರೆ.
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಚುನಾವಣೆ ಕರ್ತವ್ಯ ಬೇರೆ ಬೇರೆ ಇಲಾಖೆಗಳ ಕಾರ್ಯಗಳನ್ನು ಗ್ರಾಪಂ ಮೂಲಕ ನಡೆಸಲಾಗುತ್ತಿದ್ದು, ಇದರೊಂದಿಗೆ ಸಂಜೀವಿನಿ ಒಕ್ಕೂಟಗಳ ಜವಾಬ್ದಾರಿಯೂ ಇದೆ. ಎಸ್ಎಲ್ಆರ್ಎಂ ಘಟಕಗಳ ನಿರ್ವಹಣೆ ಹೊಣೆಯೂ ಪಿಡಿಒಗಳಿಗೆ ಇದೆ.
ಉಡುಪಿ ಜಿಲ್ಲೆಯ ಸರ್ಕಾರಿ ನೌಕರರಲ್ಲಿ(ಒಟ್ಟು 6,399) 25,596 ಫಲಾನುಭವಿಗಳನ್ನು ಒಳಗೊಳ್ಳುವ ಹಾಗೂ 3,973 ಸರ್ಕಾರಿ ನೌಕರರು ಹಾಗೂ 11,000 ಫಲಾನುಭವಿಗಳು ನೋಂದಾಯಿಸಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಉಡುಪಿ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳನ್ನು ನೋಂದಾಯಿಸುವ ಬೇಡಿಕೆ ಇನ್ನೂ ಈಡೇರಿಲ್ಲ. ತುರ್ತು ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಸರ್ಕಾರಿ ನೌಕರರು ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಬೇಕಿದೆ.