ಉಡುಪಿಯಲ್ಲಿ 'ದೇಶಾಭಿಮಾನಿ ಸಮಾವೇಶ' ಏ.26ಕ್ಕೆ

ಉಡುಪಿಯ ಪತ್ರಿಕಾ ಭವನದಲ್ಲಿ ಮಂಜುನಾಥ್​ ಗಿಳಿಯಾರು ಮಾತನಾಡಿದರು.  ಫ್ರೊ. ಕೆ.ಫಣಿರಾಜ್​, ಸುಂದರ್​ ಮಾಸ್ತರ್​, ಶ್ಯಾಮರಾಜ್​ ರ್ಬಿತಿ, ಮೆಲ್ವಿನ್​ ಅರನ್ಹಾ, ನಾಗೇಶಕುಮಾರ್​ ಉದ್ಯಾವರ, ಇರ್ಷಾದ್​ ನೇಜಾರು, ಇಕ್ಬಾಲ್​ ಹುಸೇನ್​ ಕಟಪಾಡಿ, ಚಾರ್ಲ್ಸ್​ ಯಾಂಬ್ಲರ್​, ಅಫ್ಜಾನ್​ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ಮಂಜುನಾಥ್​ ಗಿಳಿಯಾರು ಮಾತನಾಡಿದರು. ಫ್ರೊ. ಕೆ.ಫಣಿರಾಜ್​, ಸುಂದರ್​ ಮಾಸ್ತರ್​, ಶ್ಯಾಮರಾಜ್​ ರ್ಬಿತಿ, ಮೆಲ್ವಿನ್​ ಅರನ್ಹಾ, ನಾಗೇಶಕುಮಾರ್​ ಉದ್ಯಾವರ, ಇರ್ಷಾದ್​ ನೇಜಾರು, ಇಕ್ಬಾಲ್​ ಹುಸೇನ್​ ಕಟಪಾಡಿ, ಚಾರ್ಲ್ಸ್​ ಯಾಂಬ್ಲರ್​, ಅಫ್ಜಾನ್​ ಇದ್ದರು.
Published on

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್​ ಗಿಳಿಯಾರು ಮಾಹಿತಿ

* ಡಾ. ಅಂಬೇಡ್ಕರ್​ರ 135ನೇ ಜನ್ಮದಿನ ಆಚರಣೆ

ಉಡುಪಿ: ಕರ್ನಾಟಕ ದಲಿತ ಸಂರ್ಷ ಸಮಿತಿ ಅಂಬೇಡ್ಕರ್​ ವಾದ (ರಿ.) ಉಡುಪಿ ಜಿಲ್ಲೆ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ 135ನೇ ಜನದಿನದ ನಿಮಿತ್ತ ಉಡುಪಿಯ ಕ್ರಿಶ್ಚಿಯನ್​ ಮೈದಾನದಲ್ಲಿ ಏ.26ರಂದು ಮಧ್ಯಾಹ್ನ 3:30ಕ್ಕೆ 'ದೇಶಾಭಿಮಾನಿ ಸಮಾವೇಶ' ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್​ ಗಿಳಿಯಾರು ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ಏ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರನಟ ದುನಿಯಾ ವಿಜಯ್​ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿರುವ ಪ್ರಜಾಪ್ರಭುತ್ವ ವಾದಿಗಳು, ಸಂವಿಧಾನ ಪ್ರೀತಿಸುವವರನ್ನು ಸೇರಿಸಿಕೊಂಡು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. 5ರಿಂದ 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು. 

ಸಾಂಸ್ಕೃತಿಕ ಜಾಥಾಕ್ಕೆ ಚಾಲನೆ

ಅಂದು ಮಧ್ಯಾಹ್ನ 3 ಗಂಟೆಗೆ ಬೋರ್ಡ್​ ಹೈಸ್ಕೂಲ್​ ಗ್ರೌಂಡ್​ನಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಅವರು ಸಾಂಸ್ಕೃತಿಕ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್​ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದುಳಿದ ಸಮುದಾಯದವರಿಗೆ ತಲಾ 15 ಲಕ್ಷ ರೂ. ವೆಚ್ಚದಲ್ಲಿ ನೂರು ಮನೆ ಕಟ್ಟಿಸಿಕೊಟ್ಟ ಸಮಾಜಸೇವಕ ಡಾ. ಎಚ್​.ಎಸ್​. ಶೆಟ್ಟಿ ಅವರಿಗೆ 'ಭೀಮಸಾರಥಿ' ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಗುತ್ತಿದೆ. ಪ್ರಗತಿಪರ ಹೋರಾಟಗಾರ ಕೆ.ಎಲ್​. ಅಶೋಕ್​ ವಿಶೇಷ ಬಿಡುಗಡೆ ಮಾಡಲಿದ್ದಾರೆ. ಜನರಲ್ಲಿ ದೇಶಾಭಿಮಾನ ಉದ್ದೀಪನಗೊಳಿಸುವುದು ಸಮಾವೇಶದ ಉದ್ದೇಶ ಎಂದರು.

ಅಂಬೇಡ್ಕರ್​ ಸಂಕಲ್ಪ ಮಾದರಿ

ಸಹಬಾಳ್ವೆಯ ಉಡುಪಿ ಸಂಚಾಲಕ ಫ್ರೊ. ಕೆ.ಫಣಿರಾಜ್​ ಮಾತನಾಡಿ, ರಾಜಕೀಯ ಪ್ರಜಾಪ್ರಭುತ್ವ ಸಾಧ್ಯವಿದೆ. ಆದರೆ, ಸಾಮಾಜಿಕ ಪ್ರಜಾಪ್ರಭುತ್ವ ಸಾಧ್ಯವಾಗುವುದಿಲ್ಲ. ಹೀಗಾಗಿ ಕಾನೂನಿಗೆ ಸೇವಿತವಾಗಿರುವ ಸಮಾನತೆ ಆಚರಣೆಯಲ್ಲಿ ಬರಬೇಕು ಎನ್ನುವುದು ಡಾ. ಬಾಬಾ ಸಾಹೇಬ್​ರ ಆಶಯವಾಗಿತ್ತು. ಅದನ್ನು ಸಾಕಾರಗೊಳಿಸುವುದು ಎಲ್ಲರ ಜವಾಬ್ದಾರಿ. ಹೀಗಾಗಿ ಅಂಬೇಡ್ಕರ್​ರ ಮಹತ್ವದ ಸಂಕಲ್ಪವನ್ನು ಮಾದರಿಯಾಗಿಸಿಕೊಂಡು 'ದೇಶಾಭಿಮಾನಿ ಸಮಾವೇಶ' ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್​ ಮಾಸ್ತರ್​, ಶ್ಯಾಮರಾಜ್​ ಬಿರ್ತಿ, ಮೆಲ್ವಿನ್​ ಅರನ್ಹಾ, ನಾಗೇಶಕುಮಾರ್​ ಉದ್ಯಾವರ, ಇರ್ಷಾದ್​ ನೇಜಾರು, ಇಕ್ಬಾಲ್​ ಹುಸೇನ್​ ಕಟಪಾಡಿ, ಚಾರ್ಲ್ಸ್​ ಯಾಂಬ್ಲರ್​, ಅಫ್ಜಾನ್​, ಎಂ.ಇಕ್ಬಾಲ್​ ಮನ್ನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net