ಗಣೇಶೋತ್ಸವದಿಂದ ಸಂಘಟನೆ, ಧಾರ್ಮಿಕ ಜಾಗೃತಿ

ಉಡುಪಿ ರಥಬೀದಿಯ ಭಕ್ತವೃಂದ ಮತ್ತು ರಿಕ್ಷಾ ಚಾಲಕರ ಶ್ರೀ ಗಣೇಶೋತ್ಸವ ಸಮಿತಿಯ ಸಹಾಯಧನ ಕೂಪನ್​ ಡ್ರಾ ಸಮಾರಂಭಕ್ಕೆ ವೇದವರ್ಧನ ಶ್ರೀ, ವಿದ್ಯಾವಲ್ಲಭ ಶ್ರೀ ಚಾಲನೆ ನೀಡಿದರು. ಅಶೋಕ್​ ಕೊಡವೂರು, ದಿನಕರ್​ ಹೇರೂರು, ಮಧುಕರ್​ ಮುದ್ರಾಡಿ, ಸತ್ಯನಾರಾಯಣ ಜಿ. ಭಟ್​, ಭಾಸ್ಕರ್​ ರಾವ್​ ಕಿದಿಯೂರು ಇದ್ದರು.
ಉಡುಪಿ ರಥಬೀದಿಯ ಭಕ್ತವೃಂದ ಮತ್ತು ರಿಕ್ಷಾ ಚಾಲಕರ ಶ್ರೀ ಗಣೇಶೋತ್ಸವ ಸಮಿತಿಯ ಸಹಾಯಧನ ಕೂಪನ್​ ಡ್ರಾ ಸಮಾರಂಭಕ್ಕೆ ವೇದವರ್ಧನ ಶ್ರೀ, ವಿದ್ಯಾವಲ್ಲಭ ಶ್ರೀ ಚಾಲನೆ ನೀಡಿದರು. ಅಶೋಕ್​ ಕೊಡವೂರು, ದಿನಕರ್​ ಹೇರೂರು, ಮಧುಕರ್​ ಮುದ್ರಾಡಿ, ಸತ್ಯನಾರಾಯಣ ಜಿ. ಭಟ್​, ಭಾಸ್ಕರ್​ ರಾವ್​ ಕಿದಿಯೂರು ಇದ್ದರು.
Published on: 

* ಶೀರೂರು ಪರ್ಯಾಯ ವೇದವರ್ಧನ ಶ್ರೀ ಆಶೀರ್ವಚನ

* ರಥಬೀದಿ ಸಮಿತಿಯ ಸಹಾಯಧನ ಕೂಪನ್​ ಡ್ರಾ ಸಮಾರಂಭ

ಉಡುಪಿ: ಗಣೇಶೋತ್ಸವದಿಂದ ಧಾರ್ಮಿಕ ಜಾಗೃತಿ ಹಾಗೂ ಸಂಘಟನೆ ಸಾಧ್ಯವಾಗುತ್ತದೆ. ಗಣೇಶನ ಆರಾಧನೆ, ಆಚರಣೆಯೊಂದಿಗೆ ಸಮಿತಿಯು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿರುವುದು ಶ್ಲಾಘನೀಯ. ನೂರಾರು ರೂಪಾಯಿ ವ್ಯಯದಲ್ಲಿ ಕಾರು ಕೊಡುಗೆಯಾಗಿ ಲಭಿಸಲಿದ್ದು, ಬಹಿರಂಗವಾಗಿ ಡ್ರಾ ಮಾಡುವ ಮೂಲಕ ಜನರ ನಂಬಿಕೆಗೂ ರಥಬೀದಿಯ ಸಮಿತಿ ಪಾತ್ರವಾಗಿದೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿಯ ರಥಬೀದಿಯಲ್ಲಿ ಭಕ್ತವೃಂದ ಮತ್ತು ರಿಕ್ಷಾ ಚಾಲಕರ ಶ್ರೀ ಗಣೇಶೋತ್ಸವ ಸಮಿತಿ ರಥಬೀದಿಯ 48ನೇ ವರ್ಷದ ಗಣೇಶೋತ್ಸವದ ನಿಮಿತ್ತ ಶನಿವಾರ (ಅ.3) ಹಮ್ಮಿಕೊಂಡಿದ್ದ ಸಹಾಯಧನ ಕೂಪನ್​ ಡ್ರಾ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ವಿವಿಧ ಬಂಪರ್​ ಬಹುಮಾನದ ಅದೃಷ್ಟದ ಚೀಟಿ ಪ್ರದರ್ಶಿಸಿದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ಶ್ರೀಕೃಷ್ಣನ ಸಾಮೀಪ್ಯದಲ್ಲಿರುವ ಈ ಸಮಿತಿಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವುದನ್ನು ಹಲವು ವರ್ಷದಿಂದ ನೋಡುತ್ತಿದ್ದೇನೆ. ಇದು ಮಾದರಿ ಗಣೇಶೋತ್ಸವ ಸಮಿತಿಯಾಗಿದೆ ಎಂದರು.

ಸಮಿತಿಯ ಅಧ್ಯಕ್ಷ ಅಶೋಕ್​ ಕೊಡವೂರು ಮಾತನಾಡಿ, ಸಮಿತಿ ವತಿಯಿಂದ ಆಟೋ ಚಾಲಕ-ಮಾಲೀಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅಲ್ಲದೆ, ಅವರ ಕುಟುಂಬದ ಆರೋಗ್ಯ ಕಾಳಜಿಗಾಗಿ ಸಹಾಯಧನವನ್ನೂ ನೀಡಲಾಗಿದೆ ಎಂದು ತಿಳಿಸಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಸಮಿತಿಯ ಅಧ್ಯಕ್ಷ ಅಶೋಕ್​ ಕೊಡವೂರು, ಉಪಾಧ್ಯಕ್ಷ ಮಧುಕರ್​ ಮುದ್ರಾಡಿ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಜಿ. ಭಟ್​, ಕಲಾ ಕಾರ್ಯದರ್ಶಿ ಭಾಸ್ಕರ್​ ರಾವ್​ ಕಿದಿಯೂರು, ಕೋಶಾಧಿಕಾರಿಗಳಾದ ಅಶೋಕ್​ ಪೈ, ಶಾಂತಾರಾಮ್​ ಸಾಲ್ವಾಂಕರ್​, ಆನಂದಕುಮಾರ್​, ಬಾಬು ಜತ್ತನ್ನ, ದಾಮೋದರ್​ ಭಟ್​, ಉಮಾನಾಥ್​, ಗೋಪಾಲಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net