ನೀಲಾವರ ಶ್ರೀ ವಿಶ್ವೇಶತೀರ್ಥ ಸ್ಮೃತಿವನ ಪೇಜಾವರ ಮಠಕ್ಕೆ ಹಸ್ತಾಂತರ

ಅರಣ್ಯ ಇಲಾಖೆ ವತಿಯಿಂದ 2 ಕೋಟಿ ರೂ. ಅನುದಾನದಲ್ಲಿ ನೀಲಾವರ ಗ್ರಾಮದಲ್ಲಿ ನಿಮಾರ್ಣಗೊಂಡು ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ ಗುರುವಾರ ಅಧಿಕೃತವಾಗಿ ನಿರ್ವಹಣೆಗಾಗಿ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿದೆ.
smrithivana
ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ ನಿರ್ವಹಣೆಗಾಗಿ ಪೇಜಾವರ ಮಠಕ್ಕೆ ಹಸ್ತಾಂತರ ಮಾಡಲಾಯಿತು.
Published on: 

ಉಡುಪಿ: ಅರಣ್ಯ ಇಲಾಖೆ ವತಿಯಿಂದ 2 ಕೋಟಿ ರೂ. ಅನುದಾನದಲ್ಲಿ ನೀಲಾವರ ಗ್ರಾಮದಲ್ಲಿ ನಿಮಾರ್ಣಗೊಂಡು ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ ಗುರುವಾರ ಅಧಿಕೃತವಾಗಿ ನಿರ್ವಹಣೆಗಾಗಿ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿದೆ.

ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮತ್ತು ಮಠದ ಸಿ ಇ ಒ ಸುಬ್ರಹ್ಮಣ್ಯ ಭಟ್​ ಕಡತಗಳಿಗೆ ಸಹಿ ಹಾಕಿದರು. ಮಠದ ಪಿ ಆರ್​ ಒ ವಾಸುದೇವ ಭಟ್​ ಪೆರಂಪಳ್ಳಿ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್​ ಪವನ್​ ಪೆರುಮುಂಡ ಉಪಸ್ಥಿತರಿದ್ದರು.

ಬಿ ಎಸ್​ ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್​ನಲ್ಲಿ ಸ್ಮೃತಿವನ ನಿಮಾರ್ಣವನ್ನು ಘೋಷಿಸಿ 2 ಕೋಟಿ ರೂ ಅನುದಾನ ನೀಡಿದ್ದರು. ರಾಜ್ಯ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆಯವರು ಕಳೆದ ಮೇ ತಿಂಗಳಲ್ಲಿ ಉದ್ಘಾಟಿಸಿದ್ದರು. ಉಡುಪಿ ನಿರ್ಮಿತಿ ಕೇಂದ್ರ ನಿಮಾರ್ಣ ಕಾಮಗಾರಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net