ಶ್ರೇಷ್ಠ, ಮೇರು ವ್ಯಕ್ತಿತ್ವದ ಕವಿ ಗೋವಿಂದ ಪೈ

ಉಡುಪಿಯಲ್ಲಿ ಆಯೋಜಿಸಿದ್ದ ಗೋವಿಂದ ಪೈ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಪಿ. ಸಂಪತ್​ ಕುಮಾರ್​ ಮಾತನಾಡಿದರು. ಪ್ರೊ. ಕೆ. ಸದಾಶಿವ ರಾವ್​, ಡಾ. ಬಿ. ಜಗದೀಶ್​ ಶೆಟ್ಟಿ, ಶ್ರಾವ್ಯಾ ಬ್ರಾಸಿ, ಡಾ. ಅರುಣಕುಮಾರ್​ ಎಸ್​.ಆರ್​. ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಗೋವಿಂದ ಪೈ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಪಿ. ಸಂಪತ್​ ಕುಮಾರ್​ ಮಾತನಾಡಿದರು. ಪ್ರೊ. ಕೆ. ಸದಾಶಿವ ರಾವ್​, ಡಾ. ಬಿ. ಜಗದೀಶ್​ ಶೆಟ್ಟಿ, ಶ್ರಾವ್ಯಾ ಬ್ರಾಸಿ, ಡಾ. ಅರುಣಕುಮಾರ್​ ಎಸ್​.ಆರ್​. ಇದ್ದರು.
Published on

* ಡಾ. ಬಿ.ಪಿ. ಸಂಪತ್​ ಕುಮಾರ್​ ಅನಿಸಿಕೆ

* ಸಂಸ್ಮರಣೆ, ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಡುಪಿ: ತನ್ನೂರಾದ ಮಂಗಳೂರಿನ ಮಂಜೇಶ್ವರವನ್ನು ರಾಜಕಾರಣಿಗಳು ಕೇರಳಕ್ಕೆ ಸೇರಿಸಿದರಲ್ಲಾ ಎಂದು ನೊಂದಿದ್ದ ರಾಷ್ಟ್ರಕವಿ ಗೋವಿಂದ ಪೈ, ಅಪ್ಪಟ ಕನ್ನಡ ಪ್ರೀತಿ ಹೊಂದಿದ್ದರು. ಮಾತೃಭಾಷೆ ಕೊಂಕಣಿಯಾಗಿದ್ದರೂ ಸಹ ಕನ್ನಡ ಪ್ರೇಮ ಬೆಳೆಸಿಕೊಂಡಿದ್ದರು. ಇಂಗ್ಲಿಷ್​, ಮಲೆಯಾಳಂ, ತಮಿಳು, ತೆಲುಗು, ತಮಿಳು, ಗ್ರೀಕ್​, ಇಟಲಿ, ಫ್ರೆಂಚ್​, ಗುಜರಾತ್​ ಸೇರಿದಂತೆ 22 ಭಾಷೆ ಓದುವ, ಮಾತನಾಡುವ ವಿದ್ವತ್​ ಹೊಂದಿದ್ದರು. ಸಂಶೋಧಕ, ವಿಮರ್ಶಕರೂ ಆಗಿದ್ದ ಅವರು ಸರಳ, ವಿಶಿಷ್ಟ ಕವಿಯಾಗಿದ್ದರಲ್ಲದೆ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಮೂಡಬಿದ್ರೆಯ ಎಕ್ಸಲೆಂಟ್​ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್​ ಕುಮಾರ್​ ತಿಳಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ ವತಿಯಿಂದ ಸೋಮವಾರ (ಮಾ.23) ಆಯೋಜಿಸಿದ್ದ ರಾಷ್ಟ್ರಕವಿ ಗೋವಿಂದ ಪೈ ಸಂಸ್ಮರಣೆ, 'ಗೋವಿಂದ ಪೈ ವ್ಯಕ್ತಿ-ಶಕ್ತಿ' ವಿಶೇಷ ಉಪನ್ಯಾಸ ಹಾಗೂ ಅವರ ರಚನೆಯ ಕಾವ್ಯ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್​ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರದ ಆಡಳಿತ ಅಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆರ್​ಆರ್​ಸಿಯ ಸಹ ಸಂಶೋಧಕ ಡಾ. ಅರುಣಕುಮಾರ್​ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು.

ತಾಯಿ ಬಾರಾ ಮೊಗವ ತೋರಾ

ರಾಷ್ಟ್ರಕವಿ ಗೋವಿಂದ ಪೈ ಅವರ 143ನೇ ಜನ್ಮದಿನದ ನಿಮಿತ್ತ ಅವರ ರಚನೆಯ ವಿವಿಧ ಕಾವ್ಯಗಳನ್ನು ಉದಯೋನ್ಮುಖ ಗಾಯಕಿ ಶ್ರಾವ್ಯಾ ಬ್ರಾಸಿ ಹಾಡಿದರು. ಬೇಸಗೆ ಬೆಚ್ಚನೆ ಬೇಯುತಿದೆ, ತಾಯಿ ಬಾರಾ ಮೊಗವ ತೋರಾ, ಜಯ ಜಯ ನಮ್ಮೊಡೆಯ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿ, ರಾಷ್ಟ್ರಕವಿಗೆ ನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net