

ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್, ಬೆಳವಾಡಿ ಮಲ್ಲಮ್ಮ, ಕಿತ್ತೂರು ರಾಣಿ ಚನ್ನಮ್ಮ ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರಾಗಿದ್ದಾರೆ. ಈಗಲೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಕಾಂಗ್ರೆಸ್ನವರ ಹೀನ ಮನಸ್ಥಿಯಿಂದ ಉನ್ನತ ಅಧಿಕಾರ ಪಡೆಯುವ ಅವಕಾಶ ಲಭಿಸುತ್ತಿಲ್ಲ. ಕಾಂಗ್ರೆಸಿಗರು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರಿನಲ್ಲಿ ಮತ ಕೇಳುತ್ತಾರೆಯೇ ಹೊರತು ಉಳಿದ ಮಹಿಳೆಯರು ಬೆಳೆಯಲು ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ಸಿನಲ್ಲಿರುವ ಮಹಿಳೆಯರು ಗುಲಾಮಗಿರಿಯಲ್ಲಿದ್ದಾರೆ.