

ಹೆಬ್ರಿ: ರಂಗಪಯಣದಲ್ಲಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಅದ್ಭುತ ಸಾಧನೆ ಮಾಡಿದ್ದು, ರಂಗಭೂಮಿಯಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ರಂಗನಟ ರಾಜ್ ಗುರು ಹೊಸಕೋಟೆ ಹೇಳಿದರು.
ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅ.22ರ ತನಕ ನಡೆಯುವ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ 4ನೇ ದಿನದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ರಂಗನಟ ಜ್ಯೋತಿಷಿ ಸುರೇಂದ್ರ ಮೋಹನ್ ಮಾತನಾಡಿದರು. ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಮತ್ತು ಆದಿಶಕ್ತಿ ಕ್ಷೇತ್ರದಲ್ಲಿ 50 ವರ್ಷಗಳಿಂದ ಸೇವೆ ಮಾಡುತ್ತಿರುವ ಶಾರದಾ ಮುದ್ರಾಡಿ ಮತ್ತು ರಘು ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೋಮಣ್ಣ ಮಡಿಕೇರಿ, ಪೂರ್ಣೇಶ ಬಜಗೋಳಿ, ರಚಿತಾ ಕುಲಾಲ್ ಕಬ್ಬಿನಾಲೆ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು. ರಚಿತಾ ಕುಲಾಲ್ ಕಬ್ಬಿನಾಲೆ ನಿರೂಪಿಸಿದರು.
ರಂಗಪಯಣ ಆದಿಮೂಲಕ ತಂಡದಿಂದ ರಾಜ್ ಗುರು ಹೊಸಕೋಟೆ ನೇತೃತ್ವದಲ್ಲಿ ರಂಗಗೀತೆಗಳ ಗಾಯನ ಸಂಭ್ರಮ ನಡೆಯಿತು.