

ಉಡುಪಿ: ಜಿಲ್ಲೆಯಲ್ಲಿ ಮಳೆಯ ವಾತಾವರಣ ಮಾಯವಾಗಿದ್ದು, ಉಡುಪಿ ನಗರ ಸಹಿತ ಜಿಲ್ಲೆಯ ವಿವಿಧಡೆ ಶನಿವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಅಕ್ಟೋಬರ್ ಮೊದಲ ವಾರದಲ್ಲೇ ಈ ರೀತಿಯಲ್ಲಿ ದಟ್ಟ ಮಂಜು ಆವರಿಸಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿತ್ತು.
ಬೆಳಗ್ಗೆ 7:30ರ ವರೆಗೂ ಮಂಜು ಮುಸುಕಿದ ವಾತಾವರಣ ಮುಂದುವರಿದಿತ್ತು. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮಂಜು ಕಾಣಿಸಿಕೊಳ್ಳುವುದು ವಾಡಿಕೆ. ಆದರೆ, ಈ ಬಾರಿ ತಿಂಗಳ ಮೊದಲೇ ಮಂಜು ಕಾಣಿಸಿಕೊಂಡಿರುವುದು ಈ ಬಾರಿಯ ಹವಾಮಾನ ವೈಪರೀತ್ಯದ ಇನ್ನೊಂದು ಸೂಚನೆಯಾಗಿದೆ.